Advertisement

ಮಾರಿಕಾಂಬಾ ದೇವಸ್ಥಾನದಲ್ಲಿ ಉಳಿದಿವೆ 5 ಸಾವಿರ ಹರಕೆ ಸೀರೆ

03:56 PM Oct 04, 2019 | Suhan S |

ಶಿರಸಿ: ಈ ಅಮ್ಮನ ಬಳಿ ಒಂದೆರಡೇ ಅಲ್ಲ, ಬರೋಬ್ಬರಿ ಐದು ಸಾವಿರಕ್ಕೂ ಅಧಿಕ ಸೀರೆಗಳಿವೆ. ಹೀಗೆ ಇರುವ ಸೀರೆಗಳನ್ನು ಏನು ಮಾಡಬೇಕು ಎಂಬುದೂ ಚಿಂತೆಯಾಗಿದೆ.

Advertisement

ಅಮ್ಮ, ಮಾರಮ್ಮ ಎಂದೆಲ್ಲ ಕರೆಸಿಕೊಳ್ಳುವ ದಕ್ಷಿಣ ಭಾತರದ ಪ್ರಸಿದ್ಧ ದೇವಿ ಮಾರಿಕಾಂಬೆಗೆ ಭಕ್ತರು ಹರಕೆಯಾಗಿ ಉಡಿ ಸೇವೆ ನೀಡುವುದು ವಾಡಿಕೆ. ಸೀರೆ, ಕಣ ತಂದು ದೇವಿಗೆ ಹರಕೆ ಒಪ್ಪಿಸುತ್ತಾರೆ. ಹೀಗೆ ಒಪ್ಪಿಸಿದ ಸೀರೆಗಳನ್ನು ಹರಾಜು ಹಾಕಿದ, ಸರಕಾರದ ಸೂಚನೆ ಪ್ರಕಾರ ನೆರೆ ಪೀಡಿತರಿಗೆ ಬಳಕೆಗೆ ಯೋಗ್ಯವಾದ ಸೀರೆ ಕೊಟ್ಟಿದ್ದು 2 ಸಾವಿರದಷ್ಟು. ಬಳಿಕವೂ ಉಳಿದದ್ದು 5 ಸಾವಿರಕ್ಕೂ ಅಧಿಕ !

ಒಂದೇ ಬಣ್ಣದವು: ಹೀಗೆ ಇರುವ ಸೀರೆಗಳಲ್ಲಿ ಹೆಚ್ಚಿನವು ಒಂದೇ ಬಣ್ಣದವು. ಅಮ್ಮನ ಪ್ರಸಾದ ಎಂದು ಒಂದೊಬ್ಬರು ಸ್ವೀಕರಿಸಿದರೂ ಸಾಮಾನ್ಯವಾಗಿ ಉಡಲು ಬಳಸದೇ ಇರುವ ಬಣ್ಣಗಳ ಸಾರಿಗಳೇ ಹೆಚ್ಚಾಗಿ ಉಳಿದುಕೊಂಡಿವೆ. ಯಾವುದೋ ಇಷ್ಟಾರ್ಥ ಈಡೇರಿಕೆಗೆ ಅಮ್ಮನಿಗೆ ಇಷ್ಟವಾದ ಸೀರೆ ಎಂದು ವಿಶೇಷವಾಗಿ ಕೆಂಪು, ಹಳದಿ, ಹಸಿರು ಬಣ್ಣದ್ದೇ ಹೆಚ್ಚು ಬರುತ್ತವೆ. ಖಾದಿ, ಪಾಲಿಸ್ಟರ್‌ ಸೇರಿದಂತೆ ರೇಷ್ಮೆ ಸೀರೆಗಳೂ ಇರುತ್ತವೆ. ಹಸಿರಿನ ಪ್ರಾಬಲ್ಯವೇ ಅಧಿಕವಾಗಿ ಉಳಿದುಕೊಂಡಿದೆ. ಈ ಮಧ್ಯೆ ಭಕ್ತರು ನೀಡಿದ ಸೀರೆ ಅಮ್ಮನಿಗೆ ಉಡಿಸಲು ಸಾಧ್ಯವಿಲ್ಲ. ಎಂಟಡಿ ಎತ್ತರದ ಕಾಷ್ಟ ದೇವಿ ಇದಾಗಿದ್ದರಿಂದ ಒಮ್ಮೆ ಸೀರೆ ತೆಗೆದು ಇನ್ನೊಂದು ಉಡಿಸಲು ಕನಿಷ್ಠ ಮೂರು ಗಂಟೆಗಳಾದರೂ ಬೇಕಾಗುತ್ತವೆ ಹಾಗೂ ಗಾತ್ರದಲ್ಲಿ ದೊಡ್ಡ ಸೀರೆಗಳೂ ಬೇಕು. ಗುಣಮಟ್ಟದಲ್ಲೂ ಒಂದೇ ಮಾದರಿಯ ಸೀರೆ ಉಡಿಸುವುದು ಕ್ರಮ. ಇಲ್ಲಿ 50ರಿಂದ 10 ಸಾವಿರ ರೂ. ಮೊತ್ತದ ಸೀರೆಗಳೂ ಬರುತ್ತವೆ.

ಟೆಂಡರ್‌ಗೆ ಚಿಂತನೆ: ಮಾರಿಕಾಂಬಾ ದೇಗುಲದಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡುವ ಸೀರೆಗಳು ರಾಶಿರಾಶಿಯಾಗಿ ಉಳಿದವಲ್ಲ, ಅವುಗಳನ್ನು ಏನು ಮಾಡಬೇಕು ಎಂಬುದು ಆಡಳಿತ ಮಂಡಳಿ ಚಿಂತನೆ ಆಯಿತು. ಮಾರಿಕಾಂಬಾ ಜಾತ್ರಾ ಬಯಲಿನಲ್ಲಿ ಪ್ರತೀ ನಿಗದಿತ ದಿನದಂದು ಹರಾಜು ಹಾಕಿದ ಬಳಿಕವೂ ಒಂದಿಷ್ಟು ಉಳಿದು ಇಷ್ಟಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಸವಾಲಿನ ನಂತರವೂ ಇಷ್ಟೊಂದು ಉಳಿದದ್ದಕ್ಕೆ ಏನಾದರೂ ಮಾಡಬೇಕು ಎಂದು ಚಿಂತನೆ ನಡೆಸಿದರು.

ಅಮ್ಮನ ಸೀರೆಯ ವಿಲೇವಾರಿಗೆ ಜಿಲ್ಲಾ ನ್ಯಾಯಾಧೀಶರ ಸುಪರ್ದಿಗೆ ಒಳಪಡುವುದರಿಂದ ಅವರ ಒಪ್ಪಿಗೆ ಪಡೆದು ಈ ಕಾರ್ಯಕ್ಕೆ ಮುಂದಾಗಿದೆ. ಭಕ್ತರು ಸಲ್ಲಿಸಿದ ಸೀರೆಗಳನ್ನು, ಕಣಗಳನ್ನು ಸವಾಲಿನ ಮೂಲಕ ಸೀರೆಯ ಮೂಲ ಬೆಲೆಯ ಅರ್ಧ ದರದಿಂದ ಭಕ್ತರಿಗೆ ನೀಡಲಾಗುತ್ತದೆ. ಸವಾಲಿನಲ್ಲಿ ಹೆಚ್ಚು ಬಂದರೆ ಅದನ್ನು ಅಮ್ಮನಿಗೇ ಒಪ್ಪಿಸಲಾಗುತ್ತದೆ ಎಂದೂ ವಿವರಿಸುತ್ತಾರೆ ಮಾರಿಕಾಂಬಾ ದೇವಸ್ಥಾನ ಉಪಾಧ್ಯಕ್ಷ ಮನೋಹರ ಮಲ್ಮನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next