Advertisement

J&K; ಗಡಿ ನುಸುಳುತ್ತಿದ್ದ ಐವರು ಉಗ್ರರನ್ನು ಹೊಡೆದುರುಳಿಸಿದ ಸೇನಾಪಡೆ

11:58 PM Oct 26, 2023 | Team Udayavani |

ಶ್ರೀನಗರ : ಪಾಕಿಸ್ಥಾನ ಕಡೆಯಿಂದ ಗಡಿ ನುಸುಳುತ್ತಿದ್ದ ಉಗ್ರರ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು ಐವರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರದ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳುವಿಕೆ ಕಾರ್ಯಾಚರಣೆಯನ್ನು ವಿಫಲಗೊಳಿಸಲಾಗಿದ್ದು 5 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಹತ್ಯೆಗೀಡಾದ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಗೆ ಸೇರಿದವರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ ವಿಜಯ್ ಕುಮಾರ್ ಅವರು ಹೇಳಿದ್ದಾರೆ.

ಈ ಹಿಂದೆ ಸೇನೆಯಿಂದ ಪ್ರತ್ಯೇಕವಾಗಿ ನಡೆಸಲಾಗುತ್ತಿದ್ದ ಒಳನುಸುಳುವಿಕೆ ತಡೆ ಕಾರ್ಯಾಚರಣೆಯಲ್ಲಿ ಪೊಲೀಸರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ.ಜಮ್ಮು ಮತ್ತು ಕಾಶ್ಮೀರದ ಉನ್ನತ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಸಭೆಯು ಶ್ರೀನಗರದಲ್ಲಿರುವ 15 ಕಾರ್ಪ್ಸ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದಿತ್ತು.

ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಸೇನಾಪಡೆಗಳು ಗಡಿಯುದ್ದಕ್ಕೂ ಹದ್ದಿನ ಕಣ್ಣು ಇರಿಸಿವೆ. ಹತರಾಗಿರುವ ಉಗ್ರರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement

ಗುರುವಾರ ರಾತ್ರಿ 8 ಗಂಟೆಗೆ ಏಕಾಏಕಿ ಪಾಕ್‌ ರೇಂಜರ್‌ಗಳು ಅರ್ನಿಯಾದಲ್ಲಿನ ಬಿಎಸ್‌ಎಫ್ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿ ದ್ದಾರೆ. ಇದಕ್ಕೆ ಬಿಎಸ್‌ಎಫ್ ತಕ್ಕ ಪ್ರತ್ಯುತ್ತರ ನೀಡಿದ್ದು, ರಾತ್ರಿ ಕೆಲವು ಗಂಟೆಗಳ ಕಾಲ ಎರಡೂ ಕಡೆ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 9 ದಿನಗಳ ಹಿಂದೆಯಷ್ಟೇ ಇದೇ ವಲಯದಲ್ಲಿ ಪಾಕಿಸ್ಥಾನಿ ರೇಂಜರ್‌ಗಳು ನಡೆಸಿದ ಅಪ್ರಚೋದಿತ ದಾಳಿಯಿಂದ ಬಿಎಸ್‌ಎಫ್ ಇಬ್ಬರು ಯೋಧರು ಗಾಯಗೊಂಡಿದ್ದರು. ಮುಂಚೂಣಿ ನೆಲೆಗಳಲ್ಲಿ ರೇಂಜರ್‌ಗಳು ನಡೆಸಿದ ಈ ಉದ್ಧಟತನದ ವಿರುದ್ಧ ಬಿಎಸ್‌ಎಫ್ ಪಾಕಿಸ್ಥಾನಕ್ಕೆ ತೀವ್ರ ಪ್ರತಿಭಟನೆ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next