Advertisement
ಅಧ್ಯಯನಕ್ಕೆ ಅನುಕೂಲವಾಗುವ ಡೆಸ್ಕ್ಗಳಿಗೆ ಅನೇಕ ವರ್ಷದಿಂದ ಸರಕಾರಿ ಶಾಲಾ ಕಾಲೇಜುಗಳು ಬೇಡಿಕೆ ಇಡುತ್ತಲೇ ಬಂದಿವೆ. ಕೊಠಡಿ ನಿರ್ಮಾಣ/ದುರಸ್ತಿ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುತ್ತಿತ್ತೇ ಹೊರತು ಬೆಂಚ್-ಡೆಸ್ಕ್ಗಳ ಪೂರೈಕೆ ಆಗುತ್ತಿರಲಿಲ್ಲ. ಬಹುತೇಕ ಶಾಲೆಗಳಲ್ಲಿ ಸ್ಥಳೀಯ ದಾನಿಗಳ ಸಹಕಾರೊಂದಿಗೆ ತುರ್ತು ಅಗತ್ಯಕ್ಕೆ ಅನುಗುಣವಾಗಿ ಡೆಸ್ಕ್ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿವೆ. 8 ಸಾವಿರ ವಿವೇಕ ಕೊಠಡಿ ನಿರ್ಮಿಸಿದ್ದರೂ ಅದಕ್ಕೆ ಬೇಕಾಡ ಡೆಸ್ಕ್, ಬೆಂಚ್ ಇತ್ಯಾದಿ ನೀಡಿರಲಿಲ್ಲ. ಇದೀಗ ಸರಕಾರವೇ ಶಾಲಾ, ಕಾಲೇಜಿಗೆ ಸುಸಜ್ಜಿತ ಡೆಸ್ಕ್ ಪೂರೈಸಲು ಟೆಂಡರ್ ಪೂರ್ಣಗೊಳಿಸಿದೆ.
ಮರದ ಹಲಗೆ ಬಳಸಿ, ಕಬ್ಬಿಣದ ಪಟ್ಟಿಗಳೊಂದಿಗೆ ಸಿದ್ಧಪಡಿಸುತ್ತಿರುವ 5 ಸೀಟರ್ ರಿವರ್ಸೆಬಲ್ ಡೆಸ್ಕ್ ಶಾಲೆಗಳ ಬೇಡಿಕೆಗೆ ಅನುಗು ಣವಾಗಿ ಪೂರೈಕೆಯಾಗಲಿದೆ. ಒಂದು ಡೆಸ್ಕ್ನಲ್ಲಿ ಐವರು ಕುಳಿತುಕೊಳ್ಳಬಹುದಾಗಿದೆ. ರಾಜ್ಯ ಅರಣ್ಯ ಕೈಗಾರಿಕೆ ನಿಗಮದಿಂದ ಡೆಸ್ಕ್ಗಳನ್ನು ಪೂರೈ ಸಲು ಟೆಂಡರ್ ಅನುಮತಿ ನೀಡಲಾಗಿದೆ. 7,365 ರೂ.ಗಳ ಘಟಕ ವೆಚ್ಚದಲ್ಲಿ ಡೆಸ್ಕ್ಗಳನ್ನು ಸಿದ್ಧಪಡಿಸಲಾಗುವುದು. ಶೇ. 10ರಷ್ಟು ಹಣವನ್ನು ಆರಂಭದಲ್ಲಿ ಹಾಗೂ ಉಳಿದ ಶೇ. 90ನ್ನು ಡಿಡಿಪಿಐಗಳ ಮೂಲಕ ನಿಗಮಕ್ಕೆ ಡೆಸ್ಕ್ ಪೂರೈಕೆ ಸಮಯದಲ್ಲಿ ನೀಡಲಾಗುತ್ತದೆ. ಉಡುಪಿ ಜಿಲ್ಲೆಗೆ 60,61,395 ರೂ. ಹಾಗೂ ದ.ಕ. ಜಿಲ್ಲೆಗೆ 1,02,22,620 ರೂ. ಅನುದಾನ ಮೀಸಲಿಡಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಸುಮಾರು 49 ಕೋ.ರೂ.ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಇಒಗಳಿಂದ ಮಾಹಿತಿ
ಯಾವ ಶಾಲೆ ಮತ್ತು ಪಿಯು ಕಾಲೇಜಿಗೆ ತುರ್ತು ಡೆಸ್ಕ್ನ ಅಗತ್ಯವಿದೆ ಎಂಬ ಮಾಹಿತಿಯನ್ನು ಶಾಲೆ, ಕಾಲೇಜಿನಿಂದ ಕ್ಷೇತ್ರ ಶಿಕ್ಷಣಾ ಧಿಕಾರಿ(ಬಿಇಒ)ಗಳು ಪಡೆದು, ಡಿಡಿಪಿಐ ಕಚೇರಿಗೆ ಸಲ್ಲಿಸಿದ್ದಾರೆ. ಡಿಡಿಪಿಐ ಕಚೇರಿಯಿಂದ ಅದನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ.
Related Articles
ಡೆಸ್ಕ್ ಪೂರೈಕೆಗೂ ಮೊದಲು ಗುಣಮಟ್ಟ ಪರಿಶೀಲನೆ ನಡೆಯಲಿದೆ. ನಿಗಮವು ಡೆಸ್ಕ್ ಸಿದ್ಧಪಡಿಸಿದ ಅನಂತರದಲ್ಲಿ ಅದರ ಸ್ಯಾಂಪಲನ್ನು ಶಿಕ್ಷಣ ಇಲಾಖೆಗೆ ಕಳುಹಿಸ ಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಡಿಡಿಪಿಐ, ಪಿಯು ಇಲಾಖೆಯ ಡಿಡಿಪಿಯು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳ ಗೊಂಡ ಸಮಿತಿಯು ಡೆಸ್ಕ್ನ ಗುಣಮಟ್ಟ ಪರಿಶೀಲಿಸ ಲಿದೆ. ಗುಣಮಟ್ಟ ಚೆನ್ನಾಗಿದ್ದರೆ ಶಾಲಾ, ಕಾಲೇಜುಗಳಿಗೆ ಪೂರೈಕೆಗೆ ಅನುಮೋದನೆ ಸಿಗಲಿದೆ. ಒಂದೊಮ್ಮೆ ಕಳಪೆ ಗುಣಮಟ್ಟದ್ದಾಗಿದ್ದು, ಹಣ ಪಾವತಿಸಿದ್ದರೆ ಈ ಸಮಿತಿಯೇ ಅದಕ್ಕೆ ಹೊಣೆಯಾಗಿರಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
Advertisement
ಜಿಲ್ಲೆಯ ಕೆಲವು ಶಾಲಾ ಕಾಲೇಜು ಗಳಲ್ಲಿ ಡೆಸ್ಕ್ ಕೊರತೆ ಹಾಗೂ ಬೇಡಿಕೆ ಇದ್ದುದ್ದರಿಂದ ಬಿಇಒಗಳ ಮೂಲಕ ಪಟ್ಟಿ ತರಿಸಿಕೊಂಡು ರಾಜ್ಯ ಕಚೇರಿಗೆ ಸಲ್ಲಿಸಿದ್ದೇವೆ. ಟೆಂಡರ್ ಕಾರ್ಯ ಮುಗಿದಿದೆ. ಒಂದೆರೆಡು ತಿಂಗಳ ಒಳಗಾಗಿ ಪೂರೈಕೆಯಾಗಲಿದೆ.– ದಯಾನಂದ ನಾಯಕ್, ಕೆ. ಗಣಪತಿ, ದ.ಕ. ಮತ್ತು ಉಡುಪಿ, ಡಿಡಿಪಿಐಗಳು ರಾಜು ಖಾರ್ವಿ ಕೊಡೇರಿ