ಮಂಗಳೂರು : ನಗರದ ಎರಡು ಶಿಕ್ಷಣ ಸಂಸ್ಥೆಗಳ ಕೋವಿಡ್‌ನ ಎರಡು ಕ್ಲಸ್ಟರ್ ಗಳಲ್ಲಿ ಏಕಾಏಕಿ ಐವರಲ್ಲಿ
ಒಮಿಕ್ರಾನ್ ದೃಢ ಪಟ್ಟಿದೆ.
ಈ ಬಗ್ಗೆ ಅರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಕ್ಲಸ್ಟರ್ 1 ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢ ವಾಗಿದ್ದು, ಕ್ಲಸ್ಟರ್ 2 ರಲ್ಲಿ ಪರೀಕ್ಷೆಗೊಳಗಾದ 19 ಪ್ರಕರಣಗಳಲ್ಲಿ 1 ಒಮಿಕ್ರಾನ್ ದೃಢ ಪಟ್ಟಿದೆ.
ರಾಜ್ಯಕ್ಕೆ ಯುಕೆ ಯಿಂದ ಬಂದ ಒಬ್ಬ ಪ್ರಯಾಣಿಕ ನಲ್ಲೂ ಒಮಿಕ್ರಾನ್ ದೃಢ ಪಟ್ಟಿದೆ ಎಂದು ಸಚಿವರು ಟ್ವೀಟ್ ನಲ್ಲಿ ಬರೆದಿದ್ದಾರೆ.
ಮೊದಲ ಕ್ಲಸ್ಟರ್ ನಲ್ಲಿ 16 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು, ಜಿನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಇಂದು ನಾಲ್ವರಿಗೆ ಒಮಿಕ್ರಾನ್ ಪಾಸಿಟಿವ್ ಎಂದು ಉಲ್ಲೇಖಿಸಿದ ವರದಿಯನ್ನು ಸ್ವೀಕರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಎಲ್ಲಾ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ.
ನರ್ಸಿಂಗ್ ಕಾಲೇಜಿನಿಂದ ಡಿಸೆಂಬರ್ 9 ರಂದು ವರದಿಯಾದ ಮತ್ತೊಂದು ಕ್ಲಸ್ಟರ್ ನಲ್ಲಿ 19 ಪ್ರಕರಣಗಳು ವರದಿಯಾಗಿದ್ದವು, ಜೀನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಆ ಪೈಕಿ 1 ವಿದ್ಯಾರ್ಥಿನಿಗೆ ದ್ರಢಪಟ್ಟಿದ್ದು,. ಆಕೆಯೂ ಆರೋಗ್ಯವಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚುವಿಕೆಯ ಪ್ರಕಾರ ಯಾರಿಗೂ ವಿದೇಶ ಪ್ರಯಾಣದ ಇತಿಹಾಸವಿಲ್ಲ ಎಂದು ಹೇಳಲಾಗಿದೆ.