Advertisement

ಖಿನ್ನತೆಗೆ ದೇಶದಲ್ಲಿ 5 ಕೋಟಿ ಬಲಿ

10:06 AM Feb 27, 2017 | |

ನವದೆಹಲಿ: ಬೆಚ್ಚಿಬೀಳುವ ಸುದ್ದಿ ಇದು. ವಿಶ್ವದಲ್ಲಿ ಬರೋಬ್ಬರಿ 322 ಮಿಲಿಯನ್‌, ಅಂದರೆ 32.30 ಕೋಟಿ ಮಂದಿ ಖಿನ್ನತೆ­ಯಿಂದ ಬಳಲುತ್ತಲೇ ಜೀವನ ಸಾಗಿಸುತ್ತಿ­ದ್ದಾರೆ. 

Advertisement

ಈ ಪೈಕಿ ಅರ್ಧದಷ್ಟು ಮಂದಿ ಆಗ್ನೇಯ ಏಷ್ಯಾ ವಲಯ ಹಾಗೂ ಪಶ್ಚಿಮ ಪೆಸಿಫಿಕ್‌ ವಲಯದವರಾಗಿದ್ದು, ಇದರಲ್ಲಿ ಭಾರತ ಮತ್ತು ಚೀನಾದ ಪಾಲು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಖನ್ನತೆ ಮತ್ತು ಇತರೆ ಸಾಮಾನ್ಯ ಮಾನಸಿಕ ಅಸ್ವಸ್ಥತೆ-ಜಾಗತಿಕ ಆರೋಗ್ಯ ಗಣತಿಯಲ್ಲಿ ಬಹಿರಂಗಗೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿ­ರುವ ಅಂಕಿ ಅಂಶಗಳ ಪ್ರಕಾರ, 2015ರಲ್ಲಿ ಭಾರತದಲ್ಲಿ 5,66,75,969 ಮಂದಿ ಖಿನ್ನತೆ­ಯಿಂದ ಬಳಲಿರುವುದು ಕಂಡುಬಂದಿದೆ. ಹಾಗೇ ಆತಂಕಕಾರಿ ಕಾಯಿಲೆಗೆ ತುತ್ತಾಗಿ ಜೀವನ ಸಾಗಿಸುತ್ತಿರುವವರು 3,84,25,093 ಜನ ಎಂದಿದೆ. ಇವೆಲ್ಲದರ ಜತೆಗೆ ಈ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವವರ ಅಂಕಿ ಅಂಶಗಳಲ್ಲಿಯೂ ಭಾರತ ಅಗ್ರ ಪಂಕ್ತಿಯಲ್ಲಿದೆ. 2015ರಲ್ಲಿ ಬರೋಬ್ಬರಿ 7,88,000 ಜನರು ಆತ್ಮಹತ್ಯೆ ಮಾಡಿಕೊಂಡಿ­ದ್ದಾರೆ. ವಿಶ್ವ ಮಟ್ಟದಲ್ಲಿ ಆತ್ಮಹತ್ಯೆ ಮಾಡಿ­ಕೊಂಡಿರುವವರ ಸಂಖ್ಯೆ ಸರಾಸರಿ 1.5ರಷ್ಟು ಹೆಚ್ಚಿದ್ದು, ಇವರಲ್ಲಿ 19ರಿಂದ 29 ವಯೋ­ಮಾನದವರು ಜಾಸ್ತಿ ಇದ್ದಾರೆ. ಜಾಗತಿಕವಾಗಿ ಹೇಳುವುದಿದ್ದರೆ ಶೇ.78ರಷ್ಟು ಆತ್ಮಹತ್ಯೆಗಳು ಕೆಳ ಮತ್ತು ಮಧ್ಯಮ ಆದಾಯ ವರ್ಗದಲ್ಲಿ ಹೆಚ್ಚಾಗಿವೆ ಎಂದು ವರದಿಯಲ್ಲಿ ಉಲ್ಲೇಖೀ­ಸಲಾಗಿದೆ. ಪ್ರಪಂಚದಲ್ಲಿ 40 ಸೆಕೆಂಡ್‌ಗಳಿಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮತ್ತೂಂದು ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next