Advertisement

ಬೇಕಿದೆ… 5 ಪಂದ್ಯಗಳ ಟೆಸ್ಟ್‌  ಸರಣಿ

11:09 AM Mar 15, 2017 | |

ಇತ್ತೀಚಿನ ದಿನಗಳಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿ ಎಂಬುದು ಹೆಚ್ಚು, 4 ಟೆಸ್ಟ್‌ ಗಳಿದ್ದರೆ ಅಬ್ಬಬ್ಟಾ! ಸಾಮಾನ್ಯವಾಗಿ ಇಂಗ್ಲೆಂಡ್‌- ಆಸ್ಟ್ರೇಲಿಯ ನಡುವಿನ ಆ್ಯಶಸ್‌ ಸರಣಿಯಲ್ಲಿ ಮಾತ್ರವೇ ನಾವು 5 ಪಂದ್ಯಗಳನ್ನು ನೋಡು ತ್ತಿದ್ದೇವೆ. ಟೆಸ್ಟ್‌ ಕ್ರಿಕೆಟಿನ ಉಳಿವಿಗೆ ಕನಿಷ್ಠ 3 ಪಂದ್ಯಗಳ ಸರಣಿಗಳಾದರೂ ನಿಯಮದಂತೆ ಅಳವಡಿಕೆಯಾಗಬೇಕು. ಆದರೆ ಈ ದಶಕದಲ್ಲಿ ಈವರೆಗೆ ನಡೆದ ಟೆಸ್ಟ್‌ ಸರಣಿಗಳಲ್ಲಿ 51 ಸರಣಿ 2 ಟೆಸ್ಟ್‌ಗಳದ್ದಾಗಿತ್ತು!

Advertisement

ಟೆಸ್ಟ್‌ ಕ್ರಿಕೆಟ್‌ ಎಂಬುದು ಆಟಗಾರನ ಪ್ರತಿಭೆಯ ನಿಜವಾದ ಒರೆಗಲ್ಲು ಹಚ್ಚುವ ಪ್ರಯತ್ನ. ವಿದೇಶದಲ್ಲಿ ಟೆಸ್ಟ್‌ ಸರಣಿ ಆಡು ವುದೆಂದರೆ ಅಲ್ಲಿನ ವಾತಾವರಣವನ್ನು ಅರ್ಥ ಮಾಡಿಕೊಳ್ಳಬೇಕು. ದೇಹವನ್ನು ಅದಕ್ಕೆ ಒಗ್ಗಿಸಿಕೊಳ್ಳಬೇಕು. ಭಾರತದ ಸೆಕೆಗೆ ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ ಆಟಗಾರರು ಅರ್ಧ ಸೋಲುತ್ತಾರೆ. ಹಾಗೇ ಭಾರತೀಯರಿಗೆ ಈ ದೇಶದ ಚಳಿ ಥರಥರ! ಅನಂತರ ಪಿಚ್‌ಗಳು. ಏಕದಿನ ಕ್ರಿಕೆಟ್‌, ಟಿ-20 ಜಾಗತೀಕರಣದ ಪ್ರಭಾವಕ್ಕೊಳಗಾದ ಸಂಸ್ಕೃತಿಯಂತೆ, ಎಲ್ಲೆಡೆ ಬಹುಪಾಲು ಒಂದೇ ತರ. ಅದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೀವು ಇಂಗ್ಲೆಂಡಿನ ಸ್ವಿಂಗ್‌, ಆಸೀಸ್‌ನ ವೇಗ, ಆಫ್ರಿಕಾದ ಬೌನ್ಸ್‌ಗಳನ್ನು ಅದರ ನಿಜಸ್ವರೂಪದಲ್ಲಿ ಕಾಣುತ್ತೀರಿ. ಇಲ್ಲಿ ಕ್ರಿಕೆಟ್‌ ಆಡಿ ಜಯಿಸಬೇಕು. ಆಟಗಾರರ ಕ್ರಿಕೆಟ್‌ ದಾಖಲೆಗಳಲ್ಲಿ ವಿದೇಶಿ ನೆಲದ ಪ್ರದರ್ಶನಕ್ಕೆ ಹೆಚ್ಚು ತೂಕ ಎಂಬುದು ಇದಕ್ಕೇ. ದುರಂತವೆಂದರೆ, ಟಾಪ್‌ ತಂಡಗಳು ಈ ಏಕ ಟೆಸ್ಟ್‌, ದ್ವಿ ಟೆಸ್ಟ್‌ ಸರಣಿ ಪ್ರಯೋಗಗಳನ್ನು ಸಣ್ಣ ತಂಡಗಳ ಎದುರಿನ “ಬಿಢೆ ತೀರಿಸುವ’ ತಂತ್ರವನ್ನಾಗಿ ಬಳಸಿ ಟೆಸ್ಟ್‌ ಕ್ರಿಕೆಟನ್ನು ಸೋಲಿಸುತ್ತಿವೆ!

ಮಂಡಳಿಗಳಿಗೂ ಆಸಕ್ತಿ ಇಲ್ಲ!
ಈ ಏಕದಿನ, ಟಿ-20 ಜನಪ್ರಿಯತೆಯಿಂದ ಟೆಸ್ಟ್‌ ಕ್ರಿಕೆಟ್‌ ಆಸಕ್ತಿ ಜನಕ್ಕಷ್ಟೇ ಅಲ್ಲ, ಕ್ರಿಕೆಟ್‌ ಮಂಡಳಿಗಳಿಗೂ ಕಡಿಮೆಯಾಗುತ್ತದೆ. ಅಂಕಿಅಂಶಗಳನ್ನೇ ಆಧರಿಸಿ ಹೇಳುವುದಾದರೆ, 1950ರ ದಶಕದಲ್ಲಿ ಒನ್‌ ಆಫ್ ಟೆಸ್ಟ್‌ ಅಂತ ನಡೆದಿದ್ದು ಕೇವಲ ಒಂದು, ದ್ವಿ ಟೆಸ್ಟ್‌ ಸರಣಿ ಆರು. 60ರ ದಶಕದಲ್ಲಿ ಏಕ ಟೆಸ್ಟ್‌ ಸರಣಿ 2, ಎರಡು ಟೆಸ್ಟ್‌ ಸರಣಿ ಒಂದೂ ಇಲ್ಲ. 70ರ ದಶಕದಲ್ಲಿ ಈ ಅನುಪಾತ 2-6ಕ್ಕೆ, 80ರ ದಶಕದಲ್ಲಿ 18-26ಕ್ಕೆ ವೃದ್ಧಿಯಾಗಿತ್ತು. 2000ದ 10 ವರ್ಷದಲ್ಲಿ ಒನ್‌ ಆಫ್ ಟೆಸ್ಟ್‌ 8 ನಡೆದರೆ, ದ್ವಿ ಟೆಸ್ಟ್‌ ಸರಣಿ 78! ಈ ದಶಕದಲ್ಲಿ ಒಂದೇ ಒಂದು ಟೆಸ್ಟ್‌ಗೆ ಕ್ರಿಕೆಟ್‌ ಪ್ರವಾಸ ಮುಗಿಸಿದ ತಂಡಗಳು ಈಗಾಗಲೇ 8. ನೆನಪಿರಲಿ, ಈ ಸಂಖ್ಯೆ ಬೆಳೆಯುತ್ತಿದೆ. 2016ರ ಅಂತ್ಯಕ್ಕೆ 2 ಟೆಸ್ಟ್‌ ಪಂದ್ಯಗಳ 51 ಸರಣಿಗಳ ಪೈಕಿ 29 ಸರಣಿ ತಳ ರ್‍ಯಾಂಕಿಂಗ್‌ನ 4 ತಂಡಗಳ ವಿರುದ್ಧ ಅಥವಾ ಅವುಗಳ ನಡುವೆ ನಡೆದಿದೆ.

ಬಡಪಾಯಿ ಬಾಂಗ್ಲಾದೇಶ!
ಅಗ್ರ ತಂಡಗಳು ಟೆಸ್ಟ್‌ ಕ್ರಿಕೆಟ್‌ನ ಉಳಿಕೆಗೆ, ಅಭಿವೃದ್ಧಿಗೆ ತಮ್ಮ ಸಹಕಾರ ನೀಡುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಪ್ರಗತಿ ತೋರುತ್ತಿರುವ ಬಾಂಗ್ಲಾದೇಶದಂತ ಟೆಸ್ಟ್‌ ರಾಷ್ಟ್ರಕ್ಕೆ ಇದರಿಂದ ಹೆಚ್ಚು ತೊಂದರೆ ಆಗುತ್ತಿದೆೆ. ಈ ದೇಶದಲ್ಲಿ ಆಮದು ಮಾಡಿಕೊಂಡ ಪ್ರತಿಭೆಗಳಿಲ್ಲ. ಅಲ್ಲಿನ ಜನರು ಟೆಸ್ಟ್‌ ಕ್ರಿಕೆಟ್‌ಗೂ ಬರುತ್ತಾರೆ. ಸ್ಟೇಡಿಯಂ ತುಂಬಿ ತುಳುಕುತ್ತದೆ. ಇದರ ನಡುವೆ ಟಾಪ್‌ ತಂಡಗಳಿಗೆ ರ್ಯಾಕಿಂಗ್‌ನ ಅಕ್ಕ ಪಕ್ಕದ ತಂಡಗಳ ಎದುರು ಸೋತರೆ ಹೆಚ್ಚು ಮರ್ಯಾದೆ ಹೋಗುವುದಿಲ್ಲ. ಅದೇ ಬಾಂಗ್ಲಾ ಎದುರಿನ ಪರಾಭವ ಅದರ ರ್ಯಾಕಿಂಗ್‌ನಷ್ಟೇ ಅಲ್ಲ, ಅವರ ಜಾಹೀರಾತು ಒಪ್ಪಂದಗಳ ಮೇಲೂ ಪ್ರಭಾವ ಬೀರುತ್ತದೆ.

ಇನ್ನಷ್ಟು ಟೆಸ್ಟ್‌ ರಾಷ್ಟ್ರಗಳು
ಐಸಿಸಿ ಟೆಸ್ಟ್‌  ಮಾನ್ಯತೆ ಪಡೆದ ದೇಶಗಳ ಪಟ್ಟಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ. ಬರಲಿರುವ ದಿನಗಳಲ್ಲಿ ಅಯರ್‌ಲ್ಯಾಂಡ್‌, ಅಪಾ^ನಿಸ್ಥಾನ ಮಾನ್ಯತೆ ಪಡೆಯುವ ಸರದಿಯಲ್ಲಿ ಐಸಿಸಿ ಹಸಿರು ನಿಶಾನೆಯ ಅಗತ್ಯವಿದೆ. ಇದರ ಜತೆ ಟಾಪ್‌-7 ತಂಡಗಳು ಇದನ್ನು ಸ್ವೀಕರಿಸಿ ತಾವೂ ಅವರೊಂದಿಗೆ ಟೆಸ್ಟ್‌ ಕ್ರಿಕೆಟ್‌ ಆಡಿದರೆ ಸ್ವಾಗತಾರ್ಹ. 

Advertisement

– ಮಾ.ವೆಂ.ಸ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next