Advertisement

IMPS: ಐಎಂಪಿಎಸ್‌ನಲ್ಲಿ 5 ಲಕ್ಷ ಕಳುಹಿಸಿ

11:27 PM Oct 17, 2023 | Team Udayavani |

ಹೊಸದಿಲ್ಲಿ: ಶೀಘ್ರದಲ್ಲಿಯೇ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಮೊಬೈಲ್‌ನಿಂದ ಮತ್ತೂಬ್ಬರಿಗೆ ಕ್ಷಣ ಮಾತ್ರದಲ್ಲಿ 5 ಲಕ್ಷ ರೂ. ವರೆಗೆ ವರ್ಗಾಯಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅದಕ್ಕಾಗಿ ಹಣ ಸ್ವೀಕರಿಸುವವರ ಹೆಸರು, ಖಾತೆ ಸಂಖ್ಯೆ, ಐಎಫ್ಎಸ್‌ಸಿ ಕೋಡ್‌ ಸೇರ್ಪಡೆ ಮಾಡುವ ಅಗತ್ಯವೇ ಇಲ್ಲ. ಈ ನಿಟ್ಟಿನಲ್ಲಿ ಇಮ್ಮಿಡಿಯೆಟ್‌ ಪೇಮೆಂಟ್‌ ಸರ್ವಿಸ್‌ (ಐಎಂಪಿಎಸ್‌) ನಿಯಮಗಳನ್ನು ಸರಳೀಕರಿಸುವ ಬಗ್ಗೆ ಭಾರತದ ರಾಷ್ಟ್ರೀಯ ಪಾವತಿ ನಿಗಮ ನಿಯಮಿತ (ಎನ್‌ಪಿಸಿಐ) ಚಿಂತನೆ ನಡೆಸುತ್ತಿದೆ.

Advertisement

ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಎನ್‌ಪಿಸಿಐ ಘೋಷಣೆ ಮಾಡಿತ್ತು. ಇಂಟರ್‌ನೆಟ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇವಲ ಹಣವನ್ನು ಯಾರು ಸ್ವೀಕರಿಸುತ್ತಾರೆಯೋ ಅವರ ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಹೆಸರನ್ನು ಟೈಪ್‌ ಮಾಡಿದರೆ ಸಾಕಾಗುತ್ತದೆ. ಕಾರ್ಪೊರೇಟ್‌ ಮತ್ತು ರಿಟೈಲ್‌ ಗ್ರಾಹಕರಿಗೆ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವುದರ ಬಗ್ಗೆ ಚರ್ಚೆಗಳು ನಡೆಸಿವೆ. ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಸಂಬಂಧಿಸಿದಂತೆ ಅದರ ನಿಯಮಗಳು ಬದಲಾಗುವ ಸಾಧ್ಯತೆಗಳು ಇವೆ. ಮೊಬೈಲ್‌ ಮೂಲಕ ಹಣ ಕಳುಹಿಸಲು ಮತ್ತು ಸ್ವೀಕರಿಸುವವರು ನಿಗದಿತ ಬ್ಯಾಂಕ್‌ ಖಾತೆಯ ಜತೆಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡಿಕೊಂಡಿರಬೇಕಾಗುತ್ತದೆ.

ಅನುಕೂಲವೇನು ?
ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಸುಲಭ. ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಹೆಸರು ಟೈಪ್‌ ಮಾಡಿದರೆ ಸಾಕು.

ಯಾವಾಗ ಜಾರಿ?
ಹೊಸ ವ್ಯವಸ್ಥೆ ಯಾವಾಗ ಜಾರಿಯಾಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ಬ್ಯಾಂಕಿಂಗ್‌ ಕ್ಷೇತ್ರದ ಪ್ರಮುಖರ ಪ್ರಕಾರ ಹೊಸ ವ್ಯವಸ್ಥೆ ಜಾರಿ ಹಲವು ಹಂತಗಳಲ್ಲಿ ಇದೆ.

2 ಖಾತೆಗೆ 1 ಮೊಬೈಲ್‌ ಸಂಖ್ಯೆ ಇದ್ದರೆ
ಬ್ಯಾಂಕ್‌ಗಳು ಖಾತೆದಾರರು ಹೊಂದಿರುವ ಯಾವ ಖಾತೆಗೆ ಹಣ ಸ್ವೀಕರಿಸುವಂತೆ ಮಾಡಬೇಕು ಎಂದು ಕೇಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next