Advertisement
ಜಿಲ್ಲೆಗೆ 18 ವರ್ಷದ ಮೇಲ್ಪಟ್ಟವರನ್ನು ಸೇರಿಸಿದರೆ 4ರಿಂದ 5 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಪ್ರಸ್ತುತ ಇರುವ 45 ವರ್ಷ ಮೇಲ್ಪಟ್ಟ ಸುಮಾರು 1.5 ಲಕ್ಷ ಮಂದಿ ಮೊದಲ ಡೋಸ್ ಪಡೆಯಲು ಬಾಕಿ ಉಳಿದಿದ್ದಾರೆ.
Related Articles
ಜಿಲ್ಲೆಯಲ್ಲಿ 500ರಿಂದ 2000 ಡೋಸ್‌ಗಳಷ್ಟು ಲಸಿಕೆ ಬರುತ್ತಿದ್ದು, ಇದನ್ನು ಆದ್ಯತೆಯ ಮೇರೆಗೆ ಬಾಕಿ ಉಳಿದವರಿಗೆ ನೀಡಲಾಗುತ್ತದೆ. ಜಿಲ್ಲೆಯ 73 ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇದ್ದರೂ ಸದ್ಯಕ್ಕೆ ಲಸಿಕೆ ಎಲ್ಲಿಯೂ ಲಭ್ಯವಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.
Advertisement
ಪ್ರಥಮ ಡೋಸ್ ಸದ್ಯಕ್ಕೆ ಬೇಡವಿನಾ ಕಾರಣ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಲಸಿಕೆಯ ಅಭಾವ ಇರುವ ಕಾರಣ ಎರಡನೇ ಬಾರಿಗೆ ಹಾಕಲು ಬಾಕಿಯಿರುವವರಿಗೆ ಮಾತ್ರ ಈಗ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಎರಡನೆಯ ಡೋಸ್ ತೆಗೆದುಕೊಳ್ಳುವವರಿಗೆ ಬರುತ್ತಿರುವ ವ್ಯಾಕ್ಸಿನ್ ಕೊಡಲಾಗುತ್ತಿದೆ. ವ್ಯಾಕ್ಸಿನ್ ಪೂರೈಕೆಯಾಗುತ್ತಿದ್ದಂತೆ ಮಾಧ್ಯಮದಲ್ಲಿ ಪ್ರಕಟಿಸಿ ವಿತರಿಸಲಿದ್ದೇವೆ. ಆಗ ಸಾರ್ವಜನಿಕರು ಬಂದು ಸ್ವೀಕರಿಸಬೇಕು. ಈಗ ಪೂರೈಕೆ ಇಲ್ಲದ ಕಾರಣ ಲಸಿಕೆ ಕೇಂದ್ರಕ್ಕೆ ಅನಗತ್ಯವಾಗಿ ಬಂದು ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ. ಸರಕಾರ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದೆ. ಆದರೆ ಸರಕಾರದ ಆದೇಶ ಬಂದಿಲ್ಲ. ಬಂದ ಬಳಿಕ ಪತ್ರಕರ್ತರಿಗೂ ಆದ್ಯತೆಯಲ್ಲಿ ವ್ಯಾಕ್ಸಿನ್ ನೀಡುತ್ತೇವೆ.
– ಜಿ.ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ.