Advertisement

ಭೀಕರ ಟ್ರಕ್‌ ಅಪಘಾತ, ಐವರ ಸಾವು, 6 ಮಂದಿಗೆ ಗಾಯ

11:14 AM Jan 30, 2019 | udayavani editorial |

ಸೋನಭದ್ರಾ, ಉತ್ತರ ಪ್ರದೇಶ : ವೇಗವಾಗಿ ಧಾವಿಸುತ್ತಿದ್ದ ಟ್ರಕ್‌, ಬಸ್ಸಿಗೆ ಢಿಕ್ಕಿ ಹೊಡೆದು, ಬಳಿಕ ಪೆಟ್ರೋಲ್‌ ಪಂಪ್‌ ಬಳಿ ನಿಂತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದ ಭೀಕರ ಅವಘಡದಲ್ಲಿ ಐವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡರೆಂದು ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ.

Advertisement

ಅನ್‌ಪಾರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾರಿಪಾನ್‌ ಗ್ರಾಮಕ್ಕೆ ಸಮೀಪದಲ್ಲಿ ಈ ಅವಘಡ ನಿನ್ನೆ ಮಂಗಳವಾರ ತಡ ರಾತ್ರಿ ಸಂಭವಿಸಿತ್ತು.

ಮೃತ ಪಟ್ಟವರಲ್ಲಿ  ನಿಂತಿದ್ದ ಟ್ರಕ್ಕಿನ ಟಯರ್‌ ಬದಲಾಯಿಸುತ್ತಿದ್ದವರು ಮತ್ತು ಬಸ್‌ ಪ್ರಯಾಣಿಕರು ಸೇರಿದ್ದಾರೆ. ಮೃತರಾಗಿರುವ ಐವರಲ್ಲಿ ನಾಲ್ವರನ್ನು ಗುರುತಿಸಲಾಗಿದೆ. ವೇಗದ ಚಾಲನೆಗೈದು ಅಪಘಾತ ಎಸಗಿದ ಟ್ರಕ್ಕಿನ ಚಾಲಕನು ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಠಾಣೆ ಪ್ರಭಾರಾಧಿಕಾರಿ ಶೈಲೇಶ್‌ ರಾಯ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next