ಟೆಹ್ರಾನ್: ಕತಾರ್‌ನಿಂದ 8 ಮಾಜಿ ಭಾರತೀಯ ನೌಕಾಪಡೆಯ ಸೈನಿಕರು ಸುರಕ್ಷಿತವಾಗಿ ಹಿಂದಿರುಗಿದ ನಂತರ ಭಾರತವು ಮತ್ತೊಂದು ಪ್ರಮುಖ ರಾಜತಾಂತ್ರಿಕ ಯಶಸ್ಸನ್ನು ಪಡೆದುಕೊಂಡಿದೆ.
ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲ್-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರು ಗುರುವಾರ ಬಿಡುಗಡೆ ಮಾಡಿದ್ದಾರೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ. ನಾವಿಕರು ಸಂಜೆಯ ವೇಳೆಗೆ ದೇಶವನ್ನು ತೊರೆದಿದ್ದಾರೆ ಎಂದು ಅದು ಹೇಳಿದೆ.
ಭಾರತೀಯರ ಬಿಡುಗಡೆಗಾಗಿ ನವದೆಹಲಿಯಿಂದ ನಿರಂತರ ರಾಜತಾಂತ್ರಿಕ ಪ್ರಯತ್ನಗಳು ನಡೆಯುತಿತ್ತು ಇದಕ್ಕೆ ಪ್ರತಿಯಾಗಿ ಪೋರ್ಚುಗೀಸ್ ಧ್ವಜದ ಕಂಟೈನರ್ ಹಡಗಿನ ಎಂಸಿಎಸ್ ಏರೀಸ್‌ನಿಂದ ಇರಾನ್ ಐವರು ಭಾರತೀಯರನ್ನು ಬಿಡುಗಡೆ ಮಾಡಿದೆ, ಇದಕ್ಕೂ ಮುನ್ನ ಏಪ್ರಿಲ್ 18 ರಂದು ಮಹಿಳಾ ಕೆಡೆಟ್ ಆನ್ ಟೆಸ್ಸಾ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಯಿತು. 11 ಭಾರತೀಯ ಸಿಬ್ಬಂದಿ ಇನ್ನೂ ಇರಾನ್‌ನಲ್ಲಿ ಸೆರೆಯಲ್ಲಿದ್ದಾರೆ.
ಈ ಸರಕು ಹಡಗನ್ನು ಏಪ್ರಿಲ್ 13 ರಂದು ವಶಪಡಿಸಿಕೊಳ್ಳಲಾಗಿತ್ತು. ಬಿಡುಗಡೆಗೊಂಡವರಲ್ಲಿ 5 ಭಾರತೀಯರು ಸೇರಿದಂತೆ ಫಿಲಿಪಿನೋ ಮತ್ತು ಎಸ್ಟೋನಿಯಾ ಪ್ರಜೆ ಸೇರಿದ್ದಾರೆ ಎಂದು ಪೋರ್ಚುಗಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ