Advertisement

Asia Cup 2023 ತಂಡದ ಐವರು ಸದಸ್ಯರು ಇನ್ನೂ ನೀಡಿಲ್ಲ ಯೋ-ಯೋ ಟೆಸ್ಟ್

03:32 PM Aug 26, 2023 | Team Udayavani |

ಬೆಂಗಳೂರು: ಏಷ್ಯಾ ಕಪ್ ಕೂಟಕ್ಕೆ ತಯಾರುಗುತ್ತಿರುವ ಟೀಂ ಇಂಡಿಯಾ ಆಟಗಾರರು ಬೆಂಗಳೂರಿನ ಆಲೂರಿನಲ್ಲಿ ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ. ಕೂಟಕ್ಕಾಗಿ ಶ್ರೀಲಂಕಾಗೆ ತೆರಳುವ ಮುನ್ನ ಆರು ದಿನಗಳ ಕ್ಯಾಂಪ್ ನಲ್ಲಿದ್ದಾರೆ.

Advertisement

ಕ್ಯಾಂಪ್ ನ ಮೊದಲ ದಿನದಂದು ಟೀಂ ಇಂಡಿಯಾ ಆಟಗಾರರು ಫಿಟ್ನೆಸ್ ಮತ್ತು ಮೆಡಿಕಲ್ ಟೆಸ್ಟ್ ನಲ್ಲಿ ಭಾಗವಹಿಸಿದ್ದರು. ಇದರ ಭಾಗವಾಗಿಯೇ ಯೋ-ಯೋ ಟೆಸ್ಟ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಯೋ-ಯೋ ಟೆಸ್ಟ್ ನಲ್ಲಿ 18.7 ಅಂಕ ಪಡೆದಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 17.2 ಅಂಕ ಪಡೆದಿದ್ದಾರೆ.

ಏಷ್ಯಾ ಕಪ್‌ ತಂಡದಲ್ಲಿರುವ ಭಾರತದ ಹೆಚ್ಚಿನ ಕ್ರಿಕೆಟಿಗರು ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಐದು ಮಂದಿ ಟೆಸ್ಟ್ ತೆಗೆದುಕೊಳ್ಳಲಿಲ್ಲ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಐವರು ಕ್ರಿಕೆಟಿಗರು ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ – ಎಲ್ಲರೂ ಯೋ ಯೋ ಟೆಸ್ಟ್ ನೀಡಿಲ್ಲ.

ಇದನ್ನೂ ಓದಿ:Spandana: ಎದೆಗೊತ್ತಿ ಪ್ರೀತಿಸುವೆ.. ವಿವಾಹ ವಾರ್ಷಿಕ ದಿನ ಪತ್ನಿ ನೆನೆದು ರಾಘು ಭಾವುಕ

ರಾಹುಲ್ ಇನ್ನೂ ಪೂರ್ಣ ಫಿಟ್ನೆಸ್ ಪಡೆದಿಲ್ಲ. ತಂಡದ ಮ್ಯಾನೇಜ್ ಮೆಂಟ್ ಮತ್ತು ಫಿಸಿಯೋಗಳು ಏಷ್ಯಾ ಕಪ್‌ ನ ಎದುರು ರಾಹುಲ್ ಅವರನ್ನು ಯೋ-ಯೋ ಪರೀಕ್ಷೆಗೆ ಒಳಪಡಿಸಿ ಅಪಾಯವನ್ನುಂಟು ಮಾಡಲು ಬಯಸಲಿಲ್ಲ ಎಂದು ವರದಿಯಾಗಿದೆ.

Advertisement

ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಪ್ರಸಿಧ್ ಕೃಷ್ಣ ಮತ್ತು ಸಂಜು ಸ್ಯಾಮ್ಸನ್‌ ಗೆ ಸಂಬಂಧಿಸಿದಂತೆ, ಅವರು ಐರ್ಲೆಂಡ್‌ ನ ಯಶಸ್ವಿ ಸರಣಿಯಿಂದ ಹಿಂದಿರುಗಿದ್ದರಿಂದ ಅವರು ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ನೇರವಾಗಿ ಶುಕ್ರವಾರ ಅಭ್ಯಾಸದ ಅವಧಿಯನ್ನು ಪ್ರಾರಂಭಿಸಿದರು.

ಕೆಎಲ್ ರಾಹುಲ್ ಅವರು ಶುಕ್ರವಾರವೂ ಸುಮಾರು ಒಂದು ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿದ್ದಾರೆ. ಅವರು ಮೊದಲೆರಡು ಪಂದ್ಯಗಳ ಬಳಿಕ ಏಷ್ಯಾಕಪ್ ಗೆ ಲಭ್ಯವಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next