ಕೊಲಂಬೊ: ಹಿಂದೆಂದೂ ಕಂಡಿರದಂಥ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಸೋಮವಾರ ಏಕಾಏಕಿ ಹೊತ್ತಿ ಉರಿದಿದ್ದು, ಸರಕಾರದ ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯು ಭಾರೀ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಸಾವನ್ನಪ್ಪಿರುವವರ ಸಂಖ್ಯೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉಡುಪಿ: ಕೊರಗ ಸಮುದಾಯದ ಫಲಾನುಭವಿಗೆ ಬಿಜೆಪಿ ನಿರ್ಮಿಸಿದ “ದೀನ್ ದಯಾಳ್ ನಿವಾಸ” ಹಸ್ತಾಂತರ
ಶ್ರೀಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸ ಅವರು ರಾಜೀನಾಮೆ ನೀಡುವ ಮೊದಲು ನಡೆದ ಭೀಕರ ಹಿಂಸಾಚಾರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, 225ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿ (ಮೇ 10) ವಿವರಿಸಿದೆ.
ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಸೋಮವಾರ ರಾತ್ರಿಯಿಂದಲೇ ದೇಶಾದ್ಯಂತ ಅನಿರ್ದಿಷ್ಟಾವಧಿವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಏಪ್ರಿಲ್ 9ರಿಂದ ಲಂಕಾದಲ್ಲಿ ಸರಕಾರ ವಿರೋಧಿ ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಏತನ್ಮಧ್ಯೆ ನಿರ್ಗಮಿತ ಪ್ರಧಾನಿ ಮಹೀಂದಾ ರಾಜಪಕ್ಸ ಅವರ ಬೆಂಬಲಿಗರು ಹಲ್ಲೆ ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿರುವುದಾಗಿ ವರದಿ ತಿಳಿಸಿದೆ.
Related Articles
ಆಡಳಿತಾರೂಢ 41 ರಾಜಕಾರಣಿಗಳ ಮನೆಗೆ ಬೆಂಕಿ:
ಕರ್ಫ್ಯೂ ನಡುವೆಯೇ ಉದ್ರಿಕ್ತ ಪ್ರತಿಭಟನಾಕಾರರು ಆಡಳಿತಾರೂಢ ಪಕ್ಷದ ಕನಿಷ್ಠ 41 ರಾಜಕಾರಣಿಗಳ ಮನೆಗೆ ಬೆಂಕಿ ಹಚ್ಚಲಾಗಿದೆ. ನೂರಾರು ವಾಹನಗಳು ಬೆಂಕಿಗೆ ಆಹುತಿಯಾಗಿದೆ ಎಂದು ವರದಿ ಹೇಳಿದೆ.
ರಾಜಪಕ್ಸ ಅವರ ಪೂರ್ವಜರ ಮೆಡಾ ಮುಲಾನಾ ಎಂಬ ಗ್ರಾಮದಲ್ಲಿರುವ ಮಹೀಂದಾ ರಾಜಪಕ್ಸ ಅವರ ಮ್ಯೂಸಿಯಂ ಮೇಲೆ ದಾಳಿ ನಡೆಸಿ ಅದನ್ನು ನೆಲಸಮಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.