Advertisement

ದಿವ್ಯಾಂಗರ ಯೋಜನೆಗಳಿಗೆ ಶೇ.5ರಷ್ಟು ಅನುದಾನ ಕಡ್ಡಾಯ

09:26 PM Mar 08, 2020 | Lakshmi GovindaRaj |

ಚಾಮರಾಜನಗರ: ಪ್ರತಿ ಇಲಾಖೆಗಳು ಶೇ.5ರಷ್ಟು ಅನುದಾನವನ್ನು ಕಡ್ಡಾಯವಾಗಿ ದಿವ್ಯಾಂಗರ ಕಲ್ಯಾಣ ಯೋಜನೆ ಕಾರ್ಯಕ್ರಮಗಳಿಗೆ ಮೀಸಲಿಟ್ಟು ವಿನಿಯೋಗಿಸಬೇಕಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್‌. ಬಸವರಾಜು ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯಾಂಗರ ಯೋಜನೆಗಳಿಗೆ ಎಲ್ಲ ಇಲಾಖೆಗಳು ಶೇ.5ರಷ್ಟು ಹಣವನ್ನು ವೆಚ್ಚ ಮಾಡಬೇಕಿದೆ. ಜಿಲ್ಲೆಗಳಗೂ ಭೇಟಿ ನೀಡಿ ದಿವ್ಯಾಂಗರ ಯೋಜನೆಗಳ ಅನುಷ್ಠಾನಕ್ಕೆ ತಿಳಿಸಲಾಗಿದೆ ಎಂದರು.

ಅಗತ್ಯ ಸೌಲಭ್ಯ ಕಲ್ಪಿಸಿ: ದಿವ್ಯಾಂಗರನ್ನು ನೋಡಿಕೊಳ್ಳುವ ಸಲುವಾಗಿ ಹಗಲು ಯೋಗಕ್ಷೇಮ (ಡೇ ಕೇರ್‌ ಸೆಂಟರ್‌) ಅನುಕೂಲವಾಗಿದೆ. ದಿವ್ಯಾಂಗರ ನೋಡಿಕೊಳ್ಳುವ ಆರೈಕೆದಾರರ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಆರೈಕೆದಾರರ ಕುಟುಂಬಗಳಿಗೆ ಆರ್ಥಿಕ ನೆರವು ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಅವರಿಗೂ ಉತ್ತಮ ಬದುಕು ಸಾಗಿಸಲು ಸಹ ಮುಂದಾಗಿದ್ದೇವೆ ಎಂದು ತಿಳಿಸಿದರು.

ದಿವ್ಯಾಂಗರ ಆರೋಗ್ಯ, ಆರೈಕೆ, ಸೌಲಭ್ಯಗಳಿಗಾಗಿ ಜಿಲ್ಲೆಯಲ್ಲೂ ಸಹ ವಿವಿಧ ಕೇಂದ್ರಗಳನ್ನು ತೆರೆಯಲಾಗುವುದು. ಈ ನಿಟ್ಟಿನಲ್ಲಿ ಆಗಬೇಕಿರುವ ಪ್ರಕ್ರಿಯೆಗೆ ಗಮನ ಹರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜಾಗೃತಿ ಮೂಡಿಸಿ: ದಿವ್ಯಾಂಗರಿಗೆ ಒದಗಿಸಬೇಕಿರುವ ಸೇವೆ ನೆರವಿಗೆ ಹಾಗೂ ಯೋಜನೆ ಅನುಷ್ಠಾನಗಳಿಗೆ ಇಲಾಖೆಗಳ ನಡುವೆ ಸಮನ್ವಯವು ಮುಖ್ಯವಾಗಿದೆ. ಯೋಜನೆ ಪರಿಣಾಮಕಾರಿ ಜಾರಿ ಆಗಬೇಕಿದೆ. ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಯ ಬ್ಲಾಕ್‌ ಹಂತದಲ್ಲಿಯೂ ಜಾರಿಗೆ ಬರಲಿದೆ. ಮಾಧ್ಯಮಗಳು ಸಹ ಆಗಬೇಕಿರುವ ಕಾರ್ಯಕ್ರಮಗಳ ಸಂಬಂಧ ಜಾಗೃತಿ ಮೂಡಿಸಿ ಗಮನ ಸೆಳೆಯಬೇಕಿದೆ ಎಂದು ಮನವಿ ಮಾಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಕೇರರ್ ವರ್ಲ್ಡ್ ವೈಡ್‌ ಸಂಸ್ಥೆಯ ಸಂಸ್ಥಾಪಕ ಡಾ.ಅನಿಲ್‌ ಕೆ.ಪಾಟೀಲ್‌, ಡಾ.ನಟೇಶ್‌, ಅಂಗವಿಕಲರ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಬಸವರಾಜು, ಅಂಗವಿಕಲರ ಕಲ್ಯಾಣಾಧಿಕಾರಿ ಸೋಮಶೇಖರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next