ಕಂಪ್ಯೂಟರ್ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಕ್ರಿಮಿನಲ್ ಪ್ರಯತ್ನಗಳು ಜಗತ್ತನ್ನು ಬೆಚ್ಚಿ ಬೀಳಿಸುತ್ತಿವೆ. ಇತ್ತೀಚಿನ ವಾನಾ ಕ್ರೆ„ ವೈರಸ್ ದಾಳಿಯನ್ನು ಯಾರೂ ಮರೆತಿಲ್ಲ. ಸೈಬರ್ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಕೆಲವು ಮಾರ್ಗಗಳು…
1. ಮಹತ್ವಪೂರ್ಣ ದಾಖಲೆಗಳಿಗೆ ಡಿಜಿಟಲ್ ಸಿಗ್ನೇಚರ್ ಬಳಸುವುದು ಉತ್ತಮ. ಕೈಬರಹದ ಸಹಿಯನ್ನು ಫೋರ್ಜರಿ ಮಾಡುವ ಅಪಾಯವಿರುತ್ತದೆ. ಡಿಜಿಟಲ್ ಸಿಗ್ನೇಚರ್‌ಗಳನ್ನು ನಕಲು ಮಾಡಲಾಗದು.
2. ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್‌ಗಳನ್ನು ಪಾಸ್‌ವರ್ಡ್ ಮತ್ತು ಪ್ಯಾಟರ್ನ್ ಲಾಕ್‌ನಿಂದ ಭದ್ರಪಡಿಸಿ. ಪಾಸ್‌ವರ್ಡ್‌ಗಳು ಅಂಕಿ- ಸಂಖ್ಯೆಗಳನ್ನು ಒಳಗೊಂಡಿರಲಿ. ಎಲ್ಲರಿಗೂ ತಿಳಿದ ವಿಚಾರ (ಹುಟ್ಟಿದ ದಿನ, ವರ್ಷ, ಸಂಗಾತಿಯ ಹೆಸರು)ಗಳನ್ನು ಪಾಸ್‌ವರ್ಡ್ ಮಾಡಬೇಡಿ. ಆಗಾಗ ಪಾಸ್‌ವರ್ಡ್‌ಗಳನ್ನು ಬದಲಿಸಿ.
3. ನೀವು ಟೈಪ್ ಮಾಡುವ ಅಕ್ಷರಗಳನ್ನು ತಿಳಿದುಕೊಳ್ಳುವ ತಂತ್ರಾಂಶ ಹ್ಯಾಕರ್‌ಗಳ ಬಳಿಯಿದೆ. ಎನ್‌ಕ್ರಿಪ್ಷನ್ ತಂತ್ರಾಂಶ ಬಳಸುವುದರಿಂದ ಹ್ಯಾಕರ್‌ಗಳಿಂದ ಬಚಾವಾಗಬಹುದು.
4. ಡಿಜಿಟಲ್ ಸ್ಕ್ಯಾನ್ ಲಾಕ್‌ಗಳಾದ ಥಂಬ್ (ಬೆರಳಚ್ಚು) ಲಾಕ್, ಐ (ಕಣ್ಣು) ಲಾಕ್‌ಗಳನ್ನು ಬಳಸುವುದರಿಂದ ನಿಮ್ಮ ಪರವಾನಗಿ ಇಲ್ಲದೆ ಇತರರು ನಿಮ್ಮ ಯಂತ್ರಾಂಶಗಳನ್ನು ಬಳಸಲಾಗದು.
5. ಅನಧಿಕೃತ ಸಾಫ್ಟ್ವೇರ್‌ಗಳನ್ನು ಬಳಸುವುದರಿಂದ ಬಳಕೆದಾರನಿಗೆ ಭದ್ರತೆ ಸಿಗುವುದಿಲ್ಲ. ಹ್ಯಾಕರ್‌ಗಳ ಕಣ್ಣು ಸುಲಭವಾಗಿ ನಿಮ್ಮ ಮಾಹಿತಿಗಳ ಮೇಲೆ ಬೀಳುತ್ತದೆ. ಆದ್ದರಿಂದ ಅಧಿಕೃತ ಸಾಫ್ಟ್ವೇರ್‌ಗಳನ್ನೇ ಅಳವಡಿಸಿ.
– ಮಹಾಂತೇಶ ದೊಡವಾಡ