Advertisement

ಐಪಿಎಲ್‌ ಆರಂಭಕ್ಕೆ 5 ದಿನಾಂಕ

10:06 AM Mar 16, 2020 | sudhir |

ಮುಂಬಯಿ: ಹದಿಮೂರನೇ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ತೂಗುಯ್ನಾಲೆಯಲ್ಲಿದೆ. ಇದು ನಡೆಯುತ್ತದೋ, ಇಲ್ಲವೋ ಅಥವಾ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಿ ಆಡಲಾಗುವುದೋ ಎಂಬ ಯಾವುದೇ ಪ್ರಶ್ನೆಗೆ ಶನಿವಾರದ ಸಭೆಯಲ್ಲಿ ಉತ್ತರ ಲಭಿಸಿಲ್ಲ. ಈ ನಡುವೆಯೇ ಐಪಿಎಲ್‌ ಫ್ರಾಂಚೈಸಿಗಳು ಕೂಟದ ಆರಂಭಕ್ಕೆ 5 ನೂತನ ದಿನಾಂಕಗಳನ್ನು ಸೂಚಿಸಿರುವುದು ತಿಳಿದು ಬಂದಿದೆ.

Advertisement

ಬಿಸಿಸಿಐ, ಐಪಿಎಲ್‌ ತಂಡಗಳ ಮಾಲಕರ ಸಭೆಯಲ್ಲಿ ಐಪಿಎಲ್‌ ಅಧ್ಯಕ್ಷ ಬೃಜೇಶ್‌ ಪಟೇಲ್‌ ಸಹಿತ ಉನ್ನತ ಅಧಿಕಾರಿಗಳೆಲ್ಲ ಪಾಲ್ಗೊಂಡಿದ್ದರು. ಆದರೆ ಯಾರಿಗೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ನಡುವೆ ಫ್ರಾಂಚೈಸಿಗಳ ಮಾಲಕರು ಕೂಟದ ಆರಂಭಕ್ಕೆ ಕೆಲವು ದಿನಾಂಕಗಳನ್ನು ಸೂಚಿಸಿದ್ದಾಗಿ ವರದಿಯಾಗಿದೆ. ಮಾ. 19ಕ್ಕೆ ಆರಂಭವಾಗಬೇಕಿದ್ದ ಈ ಪಂದ್ಯಾವಳಿಯನ್ನು ಎ. 15, ಎ. 21, ಎ. 25, ಮೇ 1 ಅಥವಾ ಮೇ 5ರಿಂದ ಆರಂಭಿಸಬಹುದು ಎಂದು ಸೂಚಿಸಲಾಗಿದೆ.

ಆಗ ಸುದೀರ್ಘ‌ ಐಪಿಎಲ್‌ ಪಂದ್ಯಾವಳಿಗೆ ಕನಿಷ್ಠ 15ರಿಂದ 30 ದಿನಗಳ ನಷ್ಟವಾಗಲಿದೆ. ಆಗ ಈ ಕೂಟದ ಮಾದರಿಯನ್ನು ಪರಿವರ್ತಿಸುವುದು ಅನಿವಾರ್ಯವಾಗುತ್ತದೆ. ಪರ್ಯಾಯ ಮಾರ್ಗಗಳ ಬಗ್ಗೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಚರ್ಚೆ ನಡೆಯಬೇಕಾಗುತ್ತದೆ.

ಐಪಿಎಲ್‌ ಮುಂದಿರುವ ಅವಕಾಶಗಳು
– ಪೂರ್ಣ ಮಟ್ಟದಲ್ಲೇ ಪಂದ್ಯಾವಳಿ

ಎ. 15ರ ಅನಂತರ ಪೂರ್ಣ ಮಟ್ಟದಲ್ಲೇ ಪಂದ್ಯಾವಳಿಯನ್ನು ನಡೆಸುವುದು. ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಿ ಪಂದ್ಯಗಳನ್ನು ಆಡಿಸುವುದು. ಆದರೆ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಟಗಾರರಲ್ಲಿ ಯಾವ ಉತ್ಸಾಹವೂ ಇರದು. ಹಾಗೆಯೇ ಬಿಸಿಸಿಐಗೆ ಟಿಕೆಟ್‌ ಹಣವೂ ದಕ್ಕುವುದಿಲ್ಲ. ಇವೆರಡೂ ಈ ಹಂತದಲ್ಲಿ ಬಹಳ ಮಹತ್ವದ್ದಲ್ಲವಾದ್ದರಿಂದ ಫ್ರಾಂಚೈಸಿಗಳು ಅದಕ್ಕೆ ಸಿದ್ಧವಿವೆ. ಇದರಿಂದ ಒಂದು ಹಂತದ ಲಾಭ ಸಾಧ್ಯವಿದೆ.

Advertisement

– ದಿನಕ್ಕೆ ಎರಡು ಪಂದ್ಯಗಳು
ಎ. 15ರ ಬಳಿಕ ದಿನಕ್ಕೆರಡು ಪಂದ್ಯಗಳನ್ನು ನಡೆಸಿ, ಬೇಗ ಕೂಟ ಮುಗಿಸಿಬಿಡುವುದು.

ಐಪಿಎಲ್‌ನಲ್ಲಿ ಒಟ್ಟು 60 ಪಂದ್ಯಗಳು ನಡೆಯುತ್ತವೆ. ಸದ್ಯ ಬಿಸಿಸಿಐಗೆ 40 ದಿನಗಳ ಸಮಯಾವಕಾಶವಿದೆ. ದಿನಕ್ಕೆರಡು ಪಂದ್ಯಗಳನ್ನು ನಡೆಸಿದರೆ, 40 ದಿನದಲ್ಲಿ ಕೂಟ ಮುಗಿಸಬಹುದು. ಆದರೆ ಟಿವಿ ವೀಕ್ಷಕರಿಗೆ ಇದು ಬೋರ್‌ ಹೊಡೆಸುವ ಸಾಧ್ಯತೆಯಿದೆ.

– ಜ 8 ತಂಡಗಳ 2 ವಿಭಾಗ
8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಿಯೂ ಆಡಬಹುದು. ಒಟ್ಟು 4 ಅಗ್ರ ತಂಡಗಳನ್ನು ಪ್ಲೇ ಆಫ್ಗೇರಿಸಲು ಅವಕಾಶ ನೀಡುವುದು.

ಇದುವರೆಗೆ ಐಪಿಎಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲೇ ನಡೆಯುತ್ತಿತ್ತು. ಇಲ್ಲಿ ಪ್ರತೀ ತಂಡ ಇನ್ನೊಂದು ತಂಡದ ವಿರುದ್ಧ 2 ಪಂದ್ಯಗಳನ್ನು ಆಡುತ್ತಿತ್ತು. ಈಗ 2 ಗುಂಪು ಮಾಡುವುದರಿಂದ ಪಂದ್ಯಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಕೂಟವನ್ನು ಅತ್ಯಂತ ಬೇಗ ಮುಗಿಸಬಹುದು. ಬಹುಶಃ 20 ದಿನಗಳಲ್ಲೇ ಐಪಿಎಲ್‌ ಮುಗಿಯಲೂಬಹುದು. ಕೂಟದಲ್ಲೂ ಹೆಚ್ಚಿನ ರೋಚಕತೆ ಇರುತ್ತದೆ. ಆದರೆ ನೇರಪ್ರಸಾರ ಮಾಡುವ ಸ್ಟಾರ್‌ನ್ಪೋರ್ಟ್ಸ್ಗೆ ನಷ್ಟವಾಗಲಿದೆ.

– ಸೀಮಿತ ತಾಣಗಳಲ್ಲಿ ಪಂದ್ಯಗಳು
ಕೂಟದ ಎಲ್ಲ ಪಂದ್ಯಗಳನ್ನು 2 ಅಥವಾ 3 ತಾಣಗಳಲ್ಲಿ ಆಡಿಸುವುದು. ಇದರಿಂದ ಆಟಗಾರರ ಪ್ರವಾಸದ ಅವಧಿ ಸಾಕಷ್ಟು ಕಡಿಮೆಯಾಗುತ್ತದೆ. ಸದ್ಯ ಪ್ರೇಕ್ಷಕರಿಗೆ ಅವಕಾಶ ಇಲ್ಲದಿರುವುದರಿಂದ ಇದೊಂದು ಪ್ರಶಸ್ತ ಮಾರ್ಗವಾದೀತು. ಆದರೆ ಇದರಿಂದ ಮೈದಾನದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next