Advertisement

BRICS: ಬ್ರಿಕ್ಸ್‌ಗೆ ಈಗ 5 ರಾಷ್ಟ್ರಗಳ ಸೇರ್ಪಡೆ

12:22 AM Jan 03, 2024 | Team Udayavani |

ಹೊಸದಿಲ್ಲಿ: ಉದೋಯೋನ್ಮುಖ ಆರ್ಥಿಕತೆಗಳಾದ ಬ್ರೆಜಿಲ್‌, ರಷ್ಯಾ, ಭಾರತ, ಚೀನ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಬ್ರಿಕ್ಸ್‌ಗೆ ಹೊಸದಾಗಿ ಐದು ರಾಷ್ಟ್ರಗಳು ಸೇರ್ಪಡೆಯಾಗಿವೆ. ಈಜಿಪ್ಟ್‌, ಇಥಿಯೋಪಿಯಾ, ಇರಾನ್‌, ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ಬ್ರಿಕ್ಸ್‌ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು, ಈ ದೇಶಗಳಿಗೆ ಪೂರ್ಣ ಸದಸ್ಯತ್ವ ನೀಡಲಾಗಿದೆ. ಪ್ರಸ್ತತ ಬ್ರಿಕ್ಸ್‌ ಅಧ್ಯಕ್ಷತೆ ಯನ್ನು ರಷ್ಯಾ ವಹಿಸಿಕೊಂಡಿದೆ.

Advertisement

ಈ ಕುರಿತು ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌, “ಇದೀಗ ಬ್ರಿಕ್ಸ್‌ ಒಕ್ಕೂಟವು 10 ರಾಷ್ಟ್ರಗಳ ಗುಂಪಾಗಿ ಮಾರ್ಪಟ್ಟಿದೆ. ನೂತನ ಸದಸ್ಯರಾಗಿ ಐದು ದೇಶಗಳು ಸೇರ್ಪಡೆಗೊಂಡಿವೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next