Advertisement

ಹಳಿ ತಪ್ಪಿದ ದುರಂತೋ ಎಕ್ಸ್‌ಪ್ರೆಸ್‌ ರೈಲು

08:38 AM Aug 29, 2017 | Team Udayavani |

ಮುಂಬೈ: ದೇಶದಲ್ಲಿ ಸರಣಿ  ರೈಲು ಅವಘಡಗಳು ಮುಂದುವರಿದಿದ್ದು, ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ರೈಲು ಹಳಿ ತಪ್ಪಿದೆ. ಮುಂಬೈ – ನಾಗ್ಪುರ್‌ ದುರಂತೋ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಕಳೆದ 10ದಿನಗಳಲ್ಲಿ ಇದು 4ನೇ ರೈಲು ಅವಘಡವಾಗಿದೆ.

Advertisement

ಬೆಳಿಗ್ಗೆ6.30ರ ಸುಮಾರಿಗೆ ಕಲ್ಯಾಣ್‌ ಸಮೀಪ ಈ ಘಟನೆ ನಡೆದಿದ್ದು, ರೈಲಿನ 5 ಎಸಿ ಬೋಗಿಗಳು ಹಳಿ ತಪ್ಪಿದೆ. ರಕ್ಷಣಾ ಕಾರ್ಯ ಸಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿರುವುದು ವರದಿಯಾಗಿಲ್ಲ. 

ದುರಂತೋ ರೈಲು ಹಳಿ ತಪ್ಪಿದ್ದರಿಂದ ನಾಗ್ಪುರ್‌ – ಮುಂಬೈ ಮಾರ್ಗಕ್ಕೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ರೈಲು ಬೆಳಿಗ್ಗೆ 7.55ಕ್ಕೆಮುಂಬೈ ಪಲುಪಬೇಕಿತ್ತು. 

ಮಹಾರಾಷ್ಟ್ರದಲ್ಲಿ ಒಂದು ವಾರದ ಅವಧಿಯಲ್ಲಿ ನಡೆದ ಎರಡನೇ ರೈಲು ಅವಘಡ ಇದಾಗಿದೆ. ಇದೇ 25ರಂದು ಮಹಿಮಾ ಬಳಿ ಅಂಧೇರಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ನಡುವಿನ ಲೋಕಲ್ ಟ್ರೈನ್‌ನ ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next