ಭಾರತ ಹಲವು ವೈವಿಧ್ಯತೆಯ ಪ್ರದೇಶವನ್ನು ಹೊಂದಿದೆ. ಒಂದೊಂದು ರಾಜ್ಯ, ಪ್ರದೇಶದಲ್ಲಿ ಅದರದ್ದೇ ಆದ ಸಂಪ್ರದಾಯ, ಊಟೋಪಚಾರಗಳಿವೆ. ಅದರಂತೆ ಇಂದಿಗೂ ಲಕ್ಷಾಂತರ ಜನರ ಮನಗೆದ್ದಿರುವ ರುಚಿಕರವಾದ ಬಿಸ್ಕೆಟ್ ಗಳಿವೆ. ವಿಶಿಷ್ಟ ರುಚಿಯಿಂದಾಗಿಯೇ ಭಾರತದಲ್ಲಿ ಈ ಐದು ಬಿಸ್ಕೆಟ್ ಗಳು ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಈ ಬಿಸ್ಕೆಟ್ ಗಳನ್ನು ಚಹಾದೊಂದಿಗೆ ಸವಿಯಲಾಗುತ್ತದೆ…ಇಲ್ಲವೇ ದೂರ ಪ್ರಯಾಣದ ಸಂದರ್ಭದಲ್ಲಿ, ಪಿಕ್ ನಿಕ್ ಸಂದರ್ಭಗಳಲ್ಲಿ ನಮ್ಮ ಜೊತೆ ಸಂಗಾತಿಯಾಗಿರುತ್ತದೆ. ಈ ಬಿಸ್ಕೆಟ್ ಗಳು ವಿಶಿಷ್ಟ ರುಚಿ ಮತ್ತು ಸುವಾಸನೆಯನ್ನು ಹೊಂದಿರುವುದು ಅವುಗಳ ಹೆಗ್ಗಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜನರು ಇಷ್ಟಪಡುವ ಐದು ಜನಪ್ರಿಯ ಬಿಸ್ಕೆಟ್ ಗಳ ಕಿರು ಮಾಹಿತಿ ಇಲ್ಲಿದೆ..
ಪಾರ್ಲೆ ಜಿ:
ಪಾರ್ಲೆ ಜಿ ಬಹುತೇಕ ಪ್ರತೀ ಭಾರತೀಯರ ಮನೆಯಲ್ಲಿ ಬಳಕೆಯಾಗುವ ಬಿಸ್ಕೆಟ್ ಆಗಿದೆ. ಪಾರ್ಲೆ ಗ್ಲೂಕೋ ದೇಶದಲ್ಲಿ ಜನಪ್ರಿಯ ಬಿಸ್ಕೆಟ್ ಗಳಲ್ಲಿ ಒಂದಾಗಿದೆ. ತನ್ನ ವಿಶಿಷ್ಟ ರುಚಿ ಮತ್ತು ಸುವಾಸನೆಯ ಮೂಲಕ ಪಾರ್ಲೆ ಜಿ ಇಂದಿಗೂ ಬೇಡಿಕೆಯಲ್ಲಿದೆ.
Britannia Bourbon:
ಬ್ರಿಟಾನಿಯಾ ಬೌರ್ಬನ್ ಚಾಕೋಲೇಟ್ ಪ್ಲೇವರ್ ನ ಬಿಸ್ಕತ್ ಇದಾಗಿದ್ದು, ಚಾಕೋಲೇಟ್ ಕ್ರೀಮ್ ನ ಬ್ರಿಟಾನಿಯಾ ಬೌರ್ಬನ್ ಭಾರತದಲ್ಲಿ ಜನಪ್ರಿಯ ಬಿಸ್ಕೆಟ್ ಗಳಲ್ಲಿ ಒಂದಾಗಿದೆ. ಭಾರತೀಯ ಆಹಾರ ಉದ್ಯಮದಲ್ಲಿ ಖ್ಯಾತಿ ಪಡೆದಿರುವ ನುಸ್ಲಿ ವಾಡಿಯಾ ನೇತೃತ್ವದ ಕಂಪನಿ ಇದಾಗಿದೆ.
Good Day:
ಬ್ರಿಟಾನಿಯಾದ ಗುಡ್ ಡೇ ಬಿಸ್ಕೆಟ್ ಬೆಣ್ಣೆಯ ರುಚಿ ಹೊಂದಿದ್ದು, ಮೃದುವಾಗಿರುವ ಈ ಬಿಸ್ಕೆಟ್ ವಿಶಿಷ್ಟ ರುಚಿಯಿಂದಾಗಿ ಚಹಾದೊಂದಿಗೆ ಸವಿಯಲು ಹೆಚ್ಚಿನವರು ಇಷ್ಟಪಡುತ್ತಾರೆ.
Hide & Seek:
ಪಾರ್ಲೆ ಜಿ ಸಂಸ್ಥೆಯ ಹೈಡ್ & ಸೀಕ್ ಚಾಕೋಲೇಟ್ ಮಿಶ್ರಿತ ಬಿಸ್ಕೆಟ್ ಇದಾಗಿದ್ದು, ವಿಶಿಷ್ಟ ರುಚಿಯನ್ನು ಹೊಂದಿದೆ.
Sunfeast Marie:
ಗರಿ ಗರಿ ಸನ್ ಫೀಸ್ಟ್ ಮಾರಿ ತನ್ನದೇ ವೈವಿಧ್ಯತೆಯ ರುಚಿಯನ್ನು ಹೊಂದಿದ್ದು, ಇದು ಚಹಾದೊಂದಿಗೆ ಸವಿಯಲು ಉತ್ತಮ ಆಯ್ಕೆಯಾಗಿದ್ದು, ಇಂದಿಗೂ ಸನ್ ಫೀಸ್ಟ್ ಮಾರಿ ಜನರ ಆಯ್ಕೆಗಳಲ್ಲಿ ಒಂದಾಗಿದೆ.
ದೇಶದಲ್ಲಿ ಈ ಐದು ಬಿಸ್ಕೆಟ್ ಗಳ ಹೊರತಾಗಿಯೂ ಮಾರಿ ಗೋಲ್ಡ್, 50-50, ಕ್ರ್ಯಾಕ್ ಜಾಕ್ ಬಿಸ್ಕೆಟ್ ಗಳು ಕೂಡಾ ಜನಪ್ರಿಯತೆ ಪಡೆದಿದೆ.