Advertisement

Part Time ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ನೀಡಿ 5.85 ಲ.ರೂ. ವಂಚನೆ

08:47 PM Nov 17, 2023 | Team Udayavani |

ಮಂಗಳೂರು: ಪಾರ್ಟ್‌ಟೈಮ್‌ ಜಾಬ್‌ ಹೆಸರಿನಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ನೀಡಿ 5.85 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅ. 30ರಂದು ದೂರುದಾರ ವಾಟ್ಸ್‌ಅಪ್‌ ನಂಬರ್‌ಗೆ ಬಂದ ಮೆಸೇಜ್‌ನಲ್ಲಿ ಟಾಸ್ಕ್ ಕಂಪ್ಲೀಟ್‌ ಮಾಡಿ ಹಣ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಹಣ ಪಾವತಿಸಿ ಟಾಸ್ಕ್ ಪೂರ್ಣಗೊಳಿಸಿದ್ದರು. ಅವರಿಂದ ಹಂತ ಹಂತವಾಗಿ ಅ. 30ರಿಂದ ನ. 13ರ ವರೆಗೆ ಒಟ್ಟು 5.85 ಲ.ರೂ.ಗಳನ್ನು ಪಡೆದುಕೊಂಡು ಅನಂತರ ಯಾವುದೇ ಹಣ ಮರಳಿಸದೆ ವಂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next