Advertisement
ಪದ್ಮಜಾ ಎಂಬುವರ ಮೊಬೈಲ್ ಸಂಖ್ಯೆಗೆ ಸಿಮ್ ಇ-ಕೆವೈಸಿ ಅಪ್‌ಡೇಟ್ ಮಾಡಬೇಕು. ಇಲ್ಲವಾದರೆ ಸಿಮ್ ಬ್ಲಾಕ್ ಆಗುತ್ತದೆ ಎಂಬ ಸಂದೇಶ ಕಳುಹಿಸಿದ್ದರು. ಅದರಲ್ಲಿ ಬಂದಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಅಪರಿಚಿತನು ಕೆವೈಸಿ ಅಪ್ ಡೇಟ್ ಮಾಡುವುದಾಗಿ ನಂಬಿಸಿ, ಆ್ಯಪ್ ಡೌನ್ ಲೋಡ್ ಮಾಡಲು ಹೇಳಿ, ಅದರಲ್ಲಿ ಬಂದ ಐಡಿ ಇಸಿದುಕೊಂಡು ಅವರಿಗೆ ಗೊತ್ತಾಗದಂತೆ ಎಸ್‌ಬಿಐ ಖಾತೆಯಿಂದ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಸೈಬರ್, ಇ ಆ್ಯಂಡ್ ಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement
ಗದಗ ರಸ್ತೆ ಗಾಂ ಧಿವಾಡದ ಎಬಿಎಂ ಚರ್ಚ್ ಬಳಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಕೇಶ್ವಾಪುರ ಪೊಲೀಸರು ಶುಕ್ರವಾರ ಬಂ ಧಿಸಿ 1,960ರೂ. ಮೌಲ್ಯದ ಟೆಟ್ರಾ ಪ್ಯಾಕೆಟ್‌ಗಳು ಹಾಗೂ 150 ನಗದು ವಶಪಡಿಸಿಕೊಂಡಿದ್ದಾರೆ. ಕೇಶ್ವಾಪುರ ಗಾಂಧಿ ವಾಡ ಸ್ಲಮ್‌ನ ಕುಬೇಂದ್ರ ಎ. ಚವ್ಹಾಣ ಬಂಧಿನಾದವ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.