Advertisement

ಕೋವಿಡ್‌ ಚಿಕಿತ್ಸೆಗೆ 5.5 ಕೋಟಿ ಅನುದಾನ

05:22 PM May 23, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಗಣಿ ಮತ್ತು ಭೂ ವಿಜ್ಞಾನಇಲಾಖೆಯಿಂದ 5.5 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನಖಾತೆ ಸಚಿವ ಮುರುಗೇಶ್‌ ಆರ್‌ ನಿರಾಣಿ ತಿಳಿಸಿದರು.ನಗರಕ್ಕೆ ಭೇಟಿ ನೀಡಿದ್ದ ಅವರು ಜಿಲ್ಲಾಧಿಕಾರಿ ಮತ್ತುಇತರ ಅಧಿಕಾರಿಗಳ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಇಲಾಖೆ ಕೊಟ್ಟಿರುವ ಅನುದಾನದಲ್ಲಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್‌, ಔಷಧಿಮತ್ತು ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ ಬಳಕೆಯಾಗಬೇಕಾಗಿದೆ ಎಂದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದವಿಭಾಗ ಮಟ್ಟಕ್ಕೆ 2 ರಂತೆ 10 ಆಕ್ಸಿಜನ್‌ ಟಾ Õಂಕರ್‌ಗಳು, 10 ಆಕ್ಸಿಜನ್‌ ಜನರೇಟರ್‌ಗಳನ್ನು ಖರೀದಿಸಲುಕ್ರಮ ವಹಿಸಲಾಗಿದೆ. 1000 ಆಮ್ಲಜನಕ ಸಾಂದ್ರಕ ಖರೀದಿಸಲು ಯೋಚಿಸಲಾಗಿದ್ದು, ಈ ಪೈಕಿ ಈಗಾಗಲೆ 100 ಆಮ್ಲಜನಕ ಸಾಂದ್ರಕ ‌ ಖರೀದಿಸ‌ಲಾಗಿದೆ.

ಈ ಸಾಂದ್ರಕ ‌ಗಳ ಕಾರ್ಯ, ಗುಣಮಟ್ಟ ಅರಿತುಉಳಿದ ಸಂಖ್ಯೆಯ ಸಾಂದ್ರಕಗಳನ್ನು ಖರೀದಿಸಲಾಗುವುದು. ಹೊಸದಾಗಿ ಆಕ್ಸಿಜನ್‌ ಜ® ‌ರೇಟರ್‌ ಘಟಕಕ್ಕೆ ಬದಲು ಮೊಬೈಲ್‌ ಆಕ್ಸಿಜನ್‌ ಜನರೇಟರ್‌ ಖರೀದಿಗೆ ಚಿಂತನೆ ನಡೆಯುತ್ತಿದೆ. ಈ ಜ® ‌ರೇಟರ್‌ಗಳಿಂದ 300ರಿಂದ 500 ಸಿಲಿಂಡರ್‌ಗಳನ್ನು ತುಂಬಿಸಬಹುದುಎಂದು ಮಾಹಿತಿ ನೀಡಿದರು.

ಕ್ರಷರ್‌ಗಳಿಗೆ ಡಿಜಿಎಂಎಸ್‌ ಪರವಾನಿಗೆ ಕಡ್ಡಾಯ:ರಾಮನಗರ ಜಿಲ್ಲೆಯಲ್ಲಿ 110ಬಿಲ್ಡಿಂಗ್‌ ಸ್ಟೋನ್‌ಕ್ರಷರ್‌ಗಳಿವೆ.53 ಜಲ್ಲಿ ಕ್ರಷರ್‌ಗಳಿವೆ.ಈಪೈಕಿ13ಕಷರ್‌ಗಳಿಗೆಡೈರಕ್ಟರ್‌ ಜನರಲ್‌ ಆಫ್ ಮೈನ್‌ ಸೇಫ್ಟಿಯವರಿಂದ(ಡಿಜಿಎಂಎಸ್‌) ಪರವಾನಗಿ ಹೊಂದಿದೆ. ಶಿವಮೊಗ್ಗಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯಿಂದ ಡಿಜಿಎಂಎಸ್‌ ಪರವಾನಗಿ ಕಡ್ಡಾಯಗೊಳಿಸಲಾಗಿದೆ ಎಂದರು. ಆದರೆ ರಾಜ್ಯದಲ್ಲಿ ಸದ್ಯ ಶೇ.5 ಗಣಿಗಾರಿಕೆ ನಡೆಸುವವರ ಬಳಿ ಮಾತ್ರ ಡಿಜಿಎಂಎಸ್‌ ಪರವಾನಗಿ ಇದೆ.ಉಳಿದ ಗಣಿಗಾರಿಕೆ ನಡೆಸುವವರು ಡಿಜಿಎಂಎಸ್‌ ಪರವಾನಗಿ ಪಡೆದುಕೊಳ್ಳಲು 90 ದಿನ ಕಲಾವಕಾಶ ನೀಡಿಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಬಹಳಷ್ಟು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಗಣಿಕಾರಿಕೆ ಸಂಬಂಧಿಸಿದಂತೆ ಯಾವುದೇ ಅನಾಹುತ ಸಂಭವಿಸಿದಂತೆಗಣಿ ಮಾಲೀಕರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದರು.

Advertisement

ನೂತನ ಮೈನಿಂಗ್‌ ಪಾಲಿಸಿ ಜಾರಿಗೆ ಚಿಂತನೆ: ರಾಜ್ಯದಲ್ಲಿ ನ್ಯೂ ಮೈನಿಂಗ್‌ ಪಾಲಿಸಿ ಜಾರಿಗೆ ತರಲುಚಿಂತಿಸಲಾಗುತ್ತಿದೆ. ಲಾಕ್‌ಡೌನ್‌ ತೆರವಾದ ನಂತರವಿಭಾಗೀಯವಾರು ಮೈನಿಂಗ್‌ ಅದಾಲತ್‌ಗಳನ್ನು ನಡೆಸಲಾಗುವುದು. ಈ ಅದಾಲತ್‌ಗಳಲ್ಲಿ ಗಣಿಗಾರಿಕೆಗೆಸಂಬಂಧಿಸಿದ ತೊಂದರೆ ಇದ್ದಲ್ಲಿ ಸ್ಥಳೀಯವಾಗಿನಿವಾರಿಸಬಹುದು. ಸಿಂಗಲ್ ವಿಂಡೋ ಸಿಸ್ಟಂ ಜಾರಿಗೆತಂದು ಗಣಿಗಾರಿಕೆಗೆ ಅರ್ಜಿ ಸಲ್ಲಿಸುವವರು ಬೇರೆ ಬೇರೆಇಲಾಖೆಗೆ ಹೋಗಿ ಎನ್‌ಒಸಿ ತರುವುದನ್ನು ತಪ್ಪಿಸಿಸಮಯ ಉಳಿತಾಯ ಮಾಡಬಹುದು ಎಂದು ಗಣಿಗಾರಿಕೆಗೆ ತಾವು ಉದ್ದೇಶಿಸಿರುವ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next