Advertisement

ಪಾದಯಾತ್ರೆಯಿಂದ 5.25 ಲಕ್ಷ ನಿಧಿ ಸಂಗ್ರಹ

12:40 PM Aug 14, 2019 | Suhan S |

ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳ ಭೀಕರ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ನೆರೆ ಸಂತ್ರಸ್ತರಿಗೆ ಆರ್ಥಿಕ ಸಹಾಯ ಮಾಡಲು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಸಂಪಾದನ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕೋಡಿ ನಗರದಲ್ಲಿ ಪಾದಯಾತ್ರೆ ಮೂಲಕ 5.25 ಲಕ್ಷ ರೂ. ಪರಿಹಾರ ಸಂಗ್ರಹಿಸಿದರು.

Advertisement

ಪಾದಯಾತ್ರೆ: ಮಂಗಳವಾರ ಚಿಕ್ಕೋಡಿ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಆರಂಭವಾದ ಪಾದಯಾತ್ರೆ ಬಸವ ಸರ್ಕಲ್ನಿಂದ ಸಿಎಲ್ಇ ಸಂಸ್ಥೆಯ ಮೂಲಕ ಸ್ವಾಮೀಜಿಗಳು ಪಾದಯಾತ್ರೆ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಯಾರೂ ಊಹಿಸಲಾಗದಷ್ಟು ಭೀಕರ ಪ್ರವಾಹ ಬಂದು ನದಿ ಭಾಗದ ಜನರ ಜೀವ ಹಿಂಡಿದೆ. ಪ್ರವಾಹಕ್ಕೆ ಒಳಗಾಗಿರುವ ಸಂತ್ರಸ್ತರು ಹೆದರಬೇಕಿಲ್ಲ, ಮತ್ತೆ ನಿಮ್ಮ ಜೀವನ ಮೊದಲಿನ ಹಾಗೇ ಕಟ್ಟಿಕೊಡಲು ಸ್ವಾಮೀಜಿಗಳ ನೇತೃತ್ವದಲ್ಲಿ ಪಣ ತೊಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಾ ಹಾನಿಯಾದ ಕುಟುಂಬಕ್ಕೆ ಪರಿಹಾರ ನೀಡಲಿದೆ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, 2005ರಲ್ಲಿ ಚಿಕ್ಕೋಡಿ ವಿಭಾಗದಲ್ಲಿ ಬಂದಿರುವ ಪ್ರವಾಹಕ್ಕಿಂತಲೂ ಈ ಪ್ರವಾಹ ಜಾಸ್ತಿಯಾಗಿ ಬಂದಿದೆ. ಇದರಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಶೇ 98ರಷ್ಟು ಜನ ಪ್ರವಾಹಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹ ಪೀಡಿತ ಜನರಿಗೆ ಶಾಶ್ವತ ಪರಿಹಾರ ದೊರಕಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಚಿಂಚಣಿ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಚಿಂಚಣಿ ಶ್ರೀಮಠದಿಂದ 1 ಲಕ್ಷ ರೂಗಳನ್ನು ಸಿಎಂ ಪರಿಹಾರ ನಿಧಿಗೆ ನೀಡುವುದಾಗಿ ಮಹಾ ಸ್ವಾಮಿಗಳು ಘೋಷಣೆ ಮಾಡಿದರು. ನೆರೆ ಸಂತ್ರಸ್ತರ ಬಾಳು ಹಸನಾಗಲಿ ಎಂದು ರಕ್ಷಾ ಬಂಧನಕ್ಕೆ ಅವರ ಮನೆಗೆ ಬುತ್ತಿಯೊಂದಿಗೆ ಹೋಗಿ ಅವರೊಂದಿಗೆ ಇದ್ದು ಊಟ ಮಾಡಿ ಸಂಭ್ರಮಿಸಿದರೆ ಅದೇ ಒಂದು ದೊಡ್ಡ ಕೊಡುಗೆಯಾಗಲಿದೆ ಎಂದರು.

Advertisement

ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಿ: ಇತಿಹಾಸದ್ಲಲೇ ಮೊದಲಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ಪ್ರವಾಹ ಬಂದಿದ್ದು, ಕೂಡಲೇ ಇದನ್ನು ರಾಷೀr್ರಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್‌.ಸಂಗಪ್ಪಗೋಳ ಒತ್ತಾಯಿಸಿದ್ದಾರೆ.

ಟಿಎಪಿಸಿಎಂಎಸ್‌ ಅಧ್ಯಕ್ಷ ಜಗದೀಶ ಕವಟಗಿಮಠ, ನಾಗೇಶ ಕಿವಡ, ತಹಶೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ಎಎಸ್‌ಪಿ ಜಿ.ಕೆ.ಮಿಥುನಕುಮಾರ, ಸಂಜಯ ಅಡಕೆ, ಸಂಜಯ ಅರಗೆ, ಬಿ.ಎಂ.ಸಂಗ್ರೊಳ್ಳಿ ಹಾಗೂ ಪುರಸಭೆ ಎಲ್ಲ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಂತ್ರಸ್ತರ ನಿಧಿ ಸಂಗ್ರಹ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next