Advertisement
ಶುಕ್ರವಾರ ಇಲ್ಲಿನ “ಸೂಪರ್ ನ್ಪೋರ್ಟ್ ಪಾರ್ಕ್’ನಲ್ಲಿ ಅಹರ್ನಿಶಿಯಾಗಿ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 88 ರನ್ನುಗಳಿಂದ ಶ್ರಿಲಂಕಾವನ್ನು ಮಣಿಸಿತು. ಇದರೊಂದಿಗೆ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿತು. ಇದು ದ್ವಿಪಕ್ಷೀಯ ಸರಣಿಯೊಂದನ್ನು ಹರಿಣಗಳ ಪಡೆ 5-0 ಅಂತರದಿಂದ ಗೆದ್ದ 6ನೇ ದೃಷ್ಟಾಂತ.
Related Articles
Advertisement
ಕ್ವಿಂಟನ್ ಡಿ ಕಾಕ್ ಅವರಿಂದ ದಾಖಲಾದದ್ದು 12ನೇ ಶತಕ. ಡಿ ಕಾಕ್-ಆಮ್ಲ ಜೋಡಿಯಿಂದ ಮೊದಲ ವಿಕೆಟಿಗೆ 26.3 ಓವರ್‌ಗಳಿಂದ 187 ರನ್ ಹರಿದು ಬಂತು. ಆಫ್ರಿಕಾ ಆರಂಭಿಕರಿಬ್ಬರು ಒಂದೇ ಪಂದ್ಯದಲ್ಲಿ ಶತಕ ಬಾರಿಸಿದ 5ನೇ ಸಂದರ್ಭ ಇದಾಗಿದೆ.
ಗುಣರತ್ನೆ ಪಾಲಿಗೆ ಇದು ಚೊಚ್ಚಲ ಶತಕ ಸಂಭ್ರಮ (117 ಎಸೆತ, 14 ಬೌಂಡರಿ, 2 ಸಿಕ್ಸರ್). 82 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ಲಂಕಾ ದೊಡ್ಡ ಸೋಲಿನತ್ತ ಮುಖ ಮಾಡಿದಾಗ ಗುಣರತ್ನೆ ಹೋರಾಟ ಸಂಘಟಿಸಿದರು. ಅವರಿಗೆ ಸಚಿತ ಪತಿರಣ (56) ಬೆಂಬಲ ನೀಡಿದರು.
350 ರನ್: ನೂತನ ದಾಖಲೆದಕ್ಷಿಣ ಆಫ್ರಿಕಾ 350 ಪ್ಲಸ್ ರನ್ ದಾಖಲಿಸಿದ್ದು ಇದು 24ನೇ ಸಲ. ಇದು ಏಕದಿನ ಕ್ರಿಕೆಟಿನ ನೂತನ ದಾಖಲೆ. 23 ಸಲ ಈ ಸಾಧನೆ ಮಾಡಿದ ಭಾರತ 2ನೇ ಸ್ಥಾನಕ್ಕೆ ಕುಸಿಯಿತು. ಆಸ್ಟ್ರೇಲಿಯ 3ನೇ ಸ್ಥಾನದಲ್ಲಿದೆ (18). ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-6 ವಿಕೆಟಿಗೆ 384 (ಆಮ್ಲ 154, ಡಿ ಕಾಕ್ 109, ಲಕ್ಮಲ್ 71ಕ್ಕೆ 3, ಮದುಶಂಕ 70ಕ್ಕೆ 2). ಶ್ರೀಲಂಕಾ-8 ವಿಕೆಟಿಗೆ 296 (ಗುಣರತ್ನೆ 114, ಪತಿರಣ 56, ಮಾರಿಸ್ 31ಕ್ಕೆ 4, ಪಾರ್ನೆಲ್ 51ಕ್ಕೆ 2). ಪಂದ್ಯಶ್ರೇಷ್ಠ: ಹಾಶಿಮ್ ಆಮ್ಲ. ಸರಣಿಶ್ರೇಷ್ಠ: ಫಾ ಡು ಪ್ಲೆಸಿಸ್. ಏಕದಿನ ಟೀಮ್ ರ್‍ಯಾಂಕಿಂಗ್
1. ದಕ್ಷಿಣ ಆಫ್ರಿಕಾ (119)
2. ಆಸ್ಟ್ರೇಲಿಯ (118)
3. ನ್ಯೂಜಿಲ್ಯಾಂಡ್ (113)
4. ಭಾರತ (112)
5. ಇಂಗ್ಲೆಂಡ್ (107)
6. ಶ್ರೀಲಂಕಾ (98)
7. ಬಾಂಗ್ಲಾದೇಶ (91)
8. ಪಾಕಿಸ್ಥಾನ (89)
9. ವೆಸ್ಟ್ ಇಂಡೀಸ್ (86)
10. ಅಫ್ಘಾನಿಸ್ಥಾನ (52)
11. ಜಿಂಬಾಬ್ವೆ (48)
12. ಅಯರ್‌ಲ್ಯಾಂಡ್ (42)