Advertisement
ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತ “ಎ’ ತಂಡ 6 ವಿಕೆಟ್‌ಗಳಿಂದ ಜಯ ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಸರಣಿಯ 5ನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಇಂಗ್ಲೆಂಡ್ ತಂಡವನ್ನು ವೈಟ್‌ವಾಶ್ ಮಾಡುವ ವಿಶ್ವಾಸದಲ್ಲಿ ಭಾರತ ಇದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಲಯನ್ಸ್ 8 ವಿಕೆಟ್ ಕಳೆದುಕೊಂಡು 221 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಬಾರಿಸಿ ಜಯಭೇರಿ ಬಾರಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ಶಾದೂìಲ್ ಠಾಕೂರ್ ಮಾರಕವಾಗಿ ಎರಗಿದರು. ಆರಂಭಿಕಕಾರರನ್ನು ಬೇಗನೇ ಪೆವಿಲಿಯನ್‌ಗೆ ಅಟ್ಟುವಲ್ಲಿ ಶಾದೂìಲ್ ಯಶಸ್ವಿಯಾದರು. ಅವರು ತನ್ನ 10 ಓವರ್‌ಗಳ ದಾಳಿಯಲ್ಲಿ 49 ರನ್ನಿಗೆ 4 ವಿಕೆಟ್ ಕಿತ್ತು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಆಸರೆಯಾದ ಪಂತ್
222 ರನ್‌ಗಳ ಗುರಿ ಪಡೆದ ಭಾರತ 8 ರನ್ ಗಳಿಸುವಲ್ಲಿ ಮೊದಲ ವಿಕೆಟನ್ನು ಕಳೆದುಕೊಂಡಿತ್ತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರು. ಆದರೆ ಕೆಎಲ್ ರಾಹುಲ್ (42) ಮತ್ತು ಭುಯಿ (35) ಅವರ ಉತ್ತಮ ಆಟದಿಂದಾಗಿ ಭಾರತ ಚೇತರಿಸಿತು. 5ನೇ ವಿಕೆಟಿಗೆ ಕಣಕ್ಕಿಳಿದ ರಿಷಬ್ ಪಂತ್ ಅಜೇಯ 73 ರನ್ ಹಾಗೂ ದೀಪಕ್ ಹೂಡ ಅವರ 47 ರನ್‌ಗಳ ನೆರವಿನಿಂದ ಭಾರತ ಇನ್ನೂ 21 ಎಸೆತ ಬಾಕಿ ಇರುವಾಗಲೇ 222 ರನ್ ಹೊಡೆದು ಗೆಲುವು ದಾಖಲಿಸಿತು.
Related Articles
ಭಾರತ “ಎ’-46.3 ಓವರ್‌ಗಳಲ್ಲಿ 4 ವಿಕೆಟಿಗೆ 222 (ರಾಹುಲ್ 42, ರಿಷಬ್ ಪಂತ್ ಔಟಾಗದೆ 73, ದೀಪಕ್ ಹೂಡ ಔಟಾಗದೆ 47, ಜಾಕ್ಸ್ 35ಕ್ಕೆ 2). ಪಂದ್ಯ ಶ್ರೇಷ್ಠ: ರಿಷಬ್ ಪಂತ್.
Advertisement
ಪ್ರೇಕ್ಷಕರ ಮೇಲೆ ಜೇನುನೊಣಗಳ ದಾಳಿಇಂಗ್ಲೆಂಡ್ ಲಯನ್ಸ್ ಆಟದ ವೇಳೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರ ಮೇಲೆ ಜೇನುನೊಣ ದಾಳಿ ನಡೆಸಿದೆ. ದಾಳಿಯಿಂದ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾರಣದಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಯಾವುದೇ ಆಟಗಾರರ ಮೇಲೆ ಜೇನುನೊಣಗಳು ದಾಳಿ ನಡೆಸಿಲ್ಲ. ಆದರೆ 15 ನಿಮಿಷಗಳ ಕಾಲ ಆಟ ನಿಂತಿತು. ಕ್ರೀಡಾಂಗಣದಿಂದ ಜೇನುನೊಣಗಳನ್ನು ತೆರವುಗೊಳಿಸಿದ ಬಳಿಕ ಪಂದ್ಯ ಪುನರಾರಂಭಗೊಂಡಿತು.