ಪಣಂಬೂರು: ನವಮಂಗಳೂರು ಬಂದರಿಗೆ ಐಷಾರಾಮಿ ಎಂ.ಎಸ್. ರಿವೇರಾ 4ನೇ ಪ್ರವಾಸಿ ಬೃಹತ್ ಹಡಗು ಬುಧವಾರ ಆಗಮಿಸಿದ್ದು, 980 ಪ್ರವಾಸಿಗರು ಆಗಮಿಸಿ ದ.ಕ. ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಸಂದರ್ಶಿಸಿದರು.
ಜಿಲ್ಲೆಯ ಚೆಂಡೆ, ಯಕ್ಷಗಾನ, ಭರತನಾಟ್ಯ ಮತ್ತಿತರ ಸಾಂಪ್ರದಾಯಿಕ ನೃತ್ಯ, ಕಲೆಯನ್ನು ಪ್ರವಾಸಿಗರ ಸಮ್ಮುಖ ಪ್ರದರ್ಶಿಸಲಾಯಿತು. ತುಳುನಾಡಿನ ವಿಶಿಷ್ಟ ಕಲೆಗಳನ್ನು ಕಂಡು ವಿದೇಶಿ ಪ್ರವಾಸಿಗರು ಸಂಭ್ರಮಿಸಿದರು.
ಪ್ರವಾಸಿಗರ ಅನುಕೂಲಕ್ಕಾಗಿ ಆಯುಷ್ ಆಯುರ್ವೇದ ಚಿಕಿತ್ಸಾ ವ್ಯವಸ್ಥೆ, ಸೆಲ್ಫಿ ತೆಗೆಯುವ ಸ್ಥಳ, ಯಕ್ಷಗಾನ ಮುಖವರ್ಣಿಕೆ ಕಲಾಕೃತಿ ಮತ್ತಿತರ ವ್ಯವಸ್ಥೆಗಳು ಕ್ರೂಸ್ ಲಾಂಜಿನಲ್ಲಿವೆ.
ಕಾರ್ಕಳ, ಮೂಡುಬಿದಿರೆ ಜೈನಬಸದಿ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್ ಮತ್ತು ಸ್ಥಳೀಯ ಮಾರುಕಟ್ಟೆಯಂತಹ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
ಬಂದರು ಉಪಾಧ್ಯಕ್ಷ ಕೆ.ಜಿ ನಾಥ್, ಅಧಿಕಾರಿಗಳಾದ ಎಸ್.ಆರ್. ಪಟ್ನಾಯಕ್, ಶ್ರಿಜಿಜೋ ಥೋಮಸ್ ಮತ್ತಿತರರು ಹಡಗಿನ ಮಾಸ್ಟರ್ ಹಾಗೂ ಅಧಿಕಾರಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬರಮಾಡಿಕೊಂಡರು.