Advertisement

ಹಿಮಾ ದಾಸ್‌ಗೆ 4ನೇ ಚಿನ್ನ

12:59 AM Jul 19, 2019 | Sriram |

ಹೊಸದಿಲ್ಲಿ: ಭಾರತದ ಸ್ಟಾರ್‌ ಸ್ಪ್ರಿಂಟರ್‌ ಹಿಮಾ ದಾಸ್‌ ಜುಲೈ ತಿಂಗಳಲ್ಲಿ ನಾಲ್ಕನೇ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ಬುಧವಾರ ನಡೆದ “ತಾಬೋರ್‌ ಆ್ಯತ್ಲೆಟಿಕ್‌’ ಕೂಟದ 200 ಮೀ. ರೇಸ್‌ನಲ್ಲಿ ಹಿಮಾ ದಾಸ್‌ ಈ ಸಾಧನೆಗೈದಿದ್ದಾರೆ.

Advertisement

ಅಂತಾರಾಷ್ಟ್ರೀಯ ಕೂಟವಾಗಿ ದ್ದರೂ ಸ್ಪರ್ಧಿಗಳ ಸಂಖ್ಯೆ ವಿರಳ ವಾಗಿತ್ತು. ಮಾತ್ರವಲ್ಲ, ಹೆಚ್ಚಿನವರು ಚೆಕ್‌ ಗಣರಾಜ್ಯದ ವಿವಿಧ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದರು. ಈ ನಡುವೆ ಹಿಮಾ ದಾಸ್‌ 23.25 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. 23.10 ಸೆ.ನಲ್ಲಿ ಗುರಿ ತಲುಪಿದ್ದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿದೆ.

ಹಿಮಾ ಅವರ ಸ್ನೇಹಿತೆ ವಿ.ಕೆ. ವಿಸ್ಮಯಾ ಬೆಳ್ಳಿ (23.43 ಸೆ.) ಜಯಿಸಿದರು.

ಜುಲೈಯಲ್ಲಿ
ಜಬರ್ದಸ್ತ್ ಪ್ರದರ್ಶನ
19ರ ಹರೆಯದ ಹಿಮಾ ಜುಲೈ ತಿಂಗಳಲ್ಲಿ ಜಬರ್ದಸ್ತ್ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಯುರೋಪ್‌ನಲ್ಲಿ ಜು. 2ರಂದು ಮೊದಲ ಬಾರಿ ಸ್ಪರ್ಧಾತ್ಮಕ ರೇಸ್‌ನಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲದೇ ಅವರು ಪ್ರತಿಯೊಂದು ಸ್ಪರ್ಧೆ ಯಲ್ಲೂ ತನ್ನ ನಿರ್ವಹಣೆಯನ್ನು ಉತ್ತಮಪಡಿಸಿಕೊಳ್ಳುತ್ತಲೇ ಬಂದರು. ಪೊಜಾ°ನ್‌ ಕೂಟದಲ್ಲಿ ಅವರು 23.65 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದರು.

ಜು. 7 ಮತ್ತು 13ರಂದು ಹಿಮಾ ಇನ್ನೆರಡು ಕೂಟಗಳಲ್ಲಿ ಸ್ಪರ್ಧಿಸಿ ದ್ದರು. 400 ಮೀ. ಅವರ ನೆಚ್ಚಿನ ಸ್ಪರ್ಧೆಯಾಗಿದೆ. ಆದರೆ ಅವರಿನ್ನೂ 400 ಮೀ. ಮತ್ತು 200 ಮೀ.ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿಲ್ಲ. 23.02 ಸೆ.ನಲ್ಲಿ ಗುರಿ ತಲುಪಿದರೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಬಹುದು.

Advertisement

400 ಮೀ.: ಅನಾಸ್‌ಗೆ ಚಿನ್ನ
ಪುರುಷರ 400 ಮೀ.ನಲ್ಲಿ ಮೊಹಮ್ಮದ್‌ ಅನಾಸ್‌ 45.40 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದಾರೆ. ತಂಡ ಸದಸ್ಯರಾದ ಟಾಮ್‌ ನೋಹ್‌ ನಿರ್ಮಲ್‌ ಬೆಳ್ಳಿ ಮತ್ತು ಕೆ.ಎಸ್‌. ಜೀವನ್‌ ಕಂಚು ತಮ್ಮದಾಗಿಸಿಕೊಂಡರು. ಕ್ಲಾಡೊ° ಕೂಟದಲ್ಲಿ 45.21 ಸೆ.ನಲ್ಲಿ ಗುರಿ ತಲುಪಿದ್ದ ಅನಾಸ್‌ ಚಿನ್ನ ಜಯಿಸುವ ಜತೆಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿದ್ದರು.

ಹಿಮಾ ದಾಸ್‌
ಜುಲೈ ತಿಂಗಳ ಸಾಧನೆ
ಜುಲೈ 2: ಪೊಜಾ°ನ್‌ ಆ್ಯತ್ಲೆಟಿಕ್‌ ಕೂಟದಲ್ಲಿ ಚಿನ್ನ (23.65 ಸೆ.)
ಜುಲೈ 7: ಕುಟೊ° ಆ್ಯತ್ಲೆಟಿಕ್‌ ಕೂಟದಲ್ಲಿ ಚಿನ್ನ (23.97 ಸೆ.)
ಜುಲೈ 13: ಕ್ಲಾಡೊ° ಆ್ಯತ್ಲೆಟಿಕ್‌ ಕೂಟದಲ್ಲಿ ಚಿನ್ನ (23.43 ಸೆ.)
ಜುಲೈ 17: ತಾಬೋರ್‌ ಆ್ಯತ್ಲೆಟಿಕ್‌ ಕೂಟದಲ್ಲಿ ಚಿನ್ನ (23.25 ಸೆ.)

Advertisement

Udayavani is now on Telegram. Click here to join our channel and stay updated with the latest news.

Next