Advertisement

ಜಮ್ಮು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕ ಹಂತದಲ್ಲಿ 4ಜಿ ಇಂಟರ್ನೆಟ್ ಪುನರಾರಂಭ

10:20 AM Aug 17, 2020 | keerthan |

ಶ್ರೀನಗರ: ಒಂದು ವರ್ಷದ ಬಳಿಕ ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಮತ್ತೆ ಆರಂಭಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಸದ್ಯ ಎರಡು ಜಿಲ್ಲೆಗಳಲ್ಲಿ ಸೇವೆ ಆರಂಭವಾಗಿದೆ.

Advertisement

ಕಾಶ್ಮೀರದ ಗಂದೇರ್ಬಲ್ ಮತ್ತು ಜಮ್ಮುವಿನ ಉಧಮ್ ಪುರದಲ್ಲಿ ರವಿವಾರ ರಾತ್ರಿ ಒಂಬತ್ತು ಗಂಟೆಯಿಂದ 4ಜಿ ಇಂಟರ್ನೆಟ್ ಸೇವೆ ಆರಂಭಿಸಲಾಗಿದೆ. ಜಮ್ಮು ಕಾಶ್ಮೀರದ ಉಳಿದ ಜಿಲ್ಲೆಗಳಲ್ಲಿ 2ಜಿ ವೇಗದ ಇಂಟರ್ನೆಟ್ ಸೇವೆಯೇ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದೆ.

ಎರಡು ಜಿಲ್ಲೆಗಳಲ್ಲಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೇರವಾಗಿ 4ಜಿ ವೇಗದ ಇಂಟರ್ನೆಟ್ ಸಿಗಲಿದೆ. ಆದರೆ ಪ್ರೀ ಪೇಯ್ಡ್ ಗ್ರಾಹಕರಿಗೆ ತಪಾಸಣೆಯ ನಂತರ ಈ ಸೇವೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇದಕ್ಕೂ ಮೊದಲು ಸುರಕ್ಷಿತೆಯ ದೃಷ್ಟಿಯಿಂದ ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ನಂತರ ಹಂತಹಂತವಾಗಿ ಇಂಟರ್ನೆಟ್ ಪುನರಾರಂಭಗೊಳಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next