ಮುಂಬಯಿ, ಆ. 3: ಕೋವಿಡ್-19 ರಾಜಧಾನಿಯಾಗಿ ಮಾರ್ಪಟ್ಟಿರುವ ಮುಂಬಯಿಯಲ್ಲಿ ಕೋವಿಡ್ ನ ವೇಗ ಜುಲೈ ತಿಂಗಳಲ್ಲಿ ಸ್ಥಗಿತಗೊಂಡಂತೆ ಕಾಣುತ್ತಿದ್ದು, ಕೊರೊನಾದಿಂದ ಒಟ್ಟು ರೋಗಿಗಳಲ್ಲಿ ಶೇ. 49 ರಷ್ಟು ಜುಲೈನಲ್ಲಿ ಚೇತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಜುಲೈ 1 ರಂದು ಮುಂಬಯಿಯಲ್ಲಿ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 78,708 ರಷ್ಟಿದ್ದು, ಈ ಪೈಕಿ 44,791 ರೋಗಿಗಳು ಚೇತರಿಸಿಕೊಂಡಿದ್ದಾರೆ. 29,288 ರೋಗಿಗಳು ಸಕ್ರಿಯ ಪ್ರಕರಣಗಳನ್ನು ಹೊಂದಿ ಚೇತರಿಕೆ ಪ್ರಮಾಣ ಶೇ 57 ರಷ್ಟಿತ್ತು. ನಿಖರವಾಗಿ ಒಂದು ತಿಂಗಳ ನಂತರ ಜುಲೈ 31 ರಂದು ಮುಂಬಯಿಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 1,14,278 ಕ್ಕೆ ಏರಿದರೆ, ಚೇತರಿಸಿಕೊಂಡವರ ಸಂಖ್ಯೆ 87,074 ತಲುಪಿದೆ. ಹೀಗಾಗಿ ಜುಲೈನಲ್ಲಿ ವೈರಸ್‌ನಿಂದ 42,283 ರೋಗಿಗಳನ್ನು ಗುಣಪಡಿಸಲಾಗಿದೆ. ಇದು ಗುಣಪಡಿಸಿದ ಒಟ್ಟು ರೋಗಿಗಳಲ್ಲಿ ಶೇ. 48.56 ಆಗಿದೆ. ಈ ಸಮಯದಲ್ಲಿ ಚೇತರಿಕೆ ದರವು 57 ರಿಂದ 77 ಕ್ಕೆ ಏರಿತು. ದೈನಂದಿನ ಸರಾಸರಿ ಬೆಳವಣಿಗೆಯ ದರವು 1.68 ರಿಂದ 0.91 ಕ್ಕೆ ಇಳಿದಿದೆ. ದ್ವಿಗುಣಗೊಳಿಸುವ ದರ 42 ದಿನಗಳಿಂದ 77 ದಿನಗಳಿಗೆ ಏರಿದೆ. ಜುಲೈನಲ್ಲಿ, 35,570 ಹೊಸ ಕೊರೊನಾ ರೋಗಿಗಳು ಕಂಡುಬಂದಿದ್ದಾರೆ.
ಧಾರಾವಿಯಲ್ಲಿ 72 ಪ್ರಕರಣ : ಕೋವಿಡ್ ಹಾಟ್‌ಸ್ಪಾಟ್ ಆಗಿದ್ದ ಧಾರಾವಿ ಈಗ ಕೇವಲ 72 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಧಾರಾವಿಯಲ್ಲಿ ರವಿವಾರ ಬೆರಳೆಣಿಕೆಯ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ವಾರ್ಡ್ ನ ಸಹಾಯಕ ಆಯುಕ್ತ ಕಿರಣ್ ದಿಘಾವಕರ್ ಹೇಳಿದ್ದಾರೆ. ಧಾರಾವಿಯಲ್ಲಿ ಈವರೆಗೆ 2560 ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 2235 ಮಂದಿ ಚೇತರಿಸಿಕೊಂಡು ಮನೆಗೆ ಹೋಗಿದ್ದಾರೆ. ಈ ವಾರ್ಡ್‌ನ ದಾದರ್ ಪ್ರದೇಶದಲ್ಲಿ ಒಟ್ಟು 1807 ಪ್ರಕರಣಗಳು ಪತ್ತೆಯಾಗಿದ್ದು, 1250 ಡಿಸ್ಚಾರ್ಜ್ ಆಗಿದ್ದಾರೆ. 482 ಸಕ್ರಿಯ ಪ್ರಕರಣಗಳಿವೆ. ಮಹೀಂನಲ್ಲಿ 1718 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ 1422 ಚೇತರಿಸಿಕೊಂಡಿದ್ದಾರೆ. 224 ಪ್ರಕರಣಗಳು ಸಕ್ರಿಯವಾಗಿವೆ. ಧಾರಾವಿ, ಮಹೀಮ್ ಮತ್ತು ದಾದರ್ ನಲ್ಲಿ 439 ಸಾವುಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
8,719 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ : ಜುಲೈ ತಿಂಗಳಲ್ಲಿ ಕೋವಿಡ್‌ಗೆ ಸಂಬಂಸಿದಂತೆ ಮುಂಬಯಿಯಲ್ಲಿ ಬಹಳ ಸಕಾರಾತ್ಮಕ ಫಲಿತಾಂಶಗಳು ಬಂದಿವೆ. ಚೇತರಿಕೆ ದರವು ಸುಧಾರಿಸಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಬಿಎಂಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಜುಲೈ 1 ರಂದು ಮುಂಬಯಿಯಲ್ಲಿ 29,288 ಸಕ್ರಿಯ ಪ್ರಕರಣಗಳಿತ್ತು. ಇದು ಜುಲೈ 31 ರಂದು 8719 ರಿಂದ 20,569 ಕ್ಕೆ ಇಳಿದಿದೆ. ಜುಲೈ ತಿಂಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಜುಲೈ 1 ರ ಹೊತ್ತಿಗೆ ಮುಂಬಯಿಯಲ್ಲಿ 4,629 ರೋಗಿಗಳು ಸಾವನ್ನಪ್ಪಿದ್ದರೆ, ಜುಲೈ 31 ರ ಹೊತ್ತಿಗೆ 1721 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಜುಲೈ ಅಂತ್ಯದ ವೇಳೆಗೆ, ಕೋವಿಡ್ ದಿಂದ ಮುಂ¸ಯಿಯಲ್ಲಿ ಸಾವಿನ ಸಂಖ್ಯೆ 6350 ಕ್ಕೆ ತಲುಪಿದೆ. ಅಂಧೇರಿ ಪೂರ್ವ ವಾರ್ಡ್‌ನಲ್ಲಿ ಅತೀ ಹೆಚ್ಚು 455 ರೋಗಿಗಳು ಬಲಿಯಾದರೆ, ಧಾರಾವಿ ವಾರ್ಡ್‌ನಲ್ಲಿ 439 ಮತ್ತು ಸಕಿನಾಕಾ ವಾರ್ಡ್‌ನ ಕುರ್ಲಾದಲ್ಲಿ 406 ಮಂದಿ ಸಾವನ್ನಪ್ಪಿದ್ದಾರೆ.