Advertisement

5 ವರ್ಷಗಳಲ್ಲಿ ಬಾಲಮಂದಿರಗಳಿಂದ 484 ಮಕ್ಕಳು ಕಾಣೆ: ನಾಪತ್ತೆಯಾಗಿರುವ 119 ಮಕ್ಕಳು ಎಲ್ಲಿ ?

12:01 AM Oct 28, 2022 | Team Udayavani |

ಬೆಂಗಳೂರು: ರಾಜ್ಯದ ಬಾಲಮಂದಿರ ಗಳಲ್ಲಿ 5 ವರ್ಷಗಳಲ್ಲಿ ನಾಪತ್ತೆಯಾಗಿರುವ 484 ಮಕ್ಕಳ ಪೈಕಿ 119 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ವಿವಿಧ ಬಾಲ ಮಂದಿರಗಳಲ್ಲಿ 2017ರಿಂದ 2022ರ ವರೆಗೆ ಒಟ್ಟು 484 ಮಕ್ಕಳು ಕಾಣೆಯಾಗಿದ್ದರು. ಈ ಪೈಕಿ 365 ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಉಳಿದವರ ಪತ್ತೆ ಇನ್ನೂ ಆಗಿಲ್ಲ.

ನಾಪತ್ತೆಯಾಗಿರುವ ಮಕ್ಕಳ ಪೈಕಿ ಬೆಂಗಳೂರು ನಗರ, ಮೈಸೂರು, ಧಾರವಾಡ, ಬಳ್ಳಾರಿ ಬಾಲ ಮಂದಿರ ದವರೇ ಹೆಚ್ಚು. ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಬಹುತೇಕ ಪ್ರಕರಣಗಳಲ್ಲಿ ಕಂಪೌಂಡ್‌ ಜಿಗಿದು, ಶೌಚಗೃಹದ ಕಿಟಕಿ ಮುರಿದು, ಭದ್ರತಾ ಸಿಬಂದಿ ಕಣ್ತಪ್ಪಿಸಿ, ರಾತ್ರಿ ವೇಳೆ ಮೈನ್‌ ಗೇಟ್‌ ಜಿಗಿದು ಎಸ್ಕೇಪ್‌ ಆದ ಉದಾಹರಣೆಗಳೇ ಹೆಚ್ಚು.

16-18 ವರ್ಷಕ್ಕಿಂತ ಕೆಳಗಿನ ದೌರ್ಜನ್ಯಕ್ಕೊಳ ಗಾಗಿರುವ ಮಕ್ಕಳು, ಅಪರಾಧ ಕೃತ್ಯಗಳಲ್ಲಿ ಭಾಗಿ ಯಾದ ಅಪ್ರಾಪ್ತರು, ಪಾಲಕರಿಲ್ಲದೇ ದೌರ್ಜನ್ಯ ಕ್ಕೊಳಗಾದ ವರು, ಪಾಲಕರಿಗೆ ಬೇಡವಾದ ಮಕ್ಕಳಿಗೆ ಸರಕಾರಿ ಬಾಲಮಂದಿರದಲ್ಲಿ ಆಶ್ರಯ ನಿಡ‌ ಲಾಗು ತ್ತದೆ. ಅವರಿಗೆ ವಸತಿ ಸೌಲಭ್ಯಗಳ ಜತೆಗೆ ಶಿಕ್ಷಣ ಸೇರಿ ಇನ್ನಿತರ ಸೌಕರ್ಯಗಳನ್ನೂ ಒದಗಿಸಲಾಗುತ್ತದೆ.

ಮಕ್ಕಳ ಪತ್ತೆಗೆ ನಿರ್ಲಕ್ಷ್ಯ :

Advertisement

ಬಾಲಮಂದಿರದಿಂದ ತಪ್ಪಿಸಿ ಕೊಂಡವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ಆದ ಬಳಿಕ ಪೊಲೀಸರು ಪತ್ತೆ ಬಗ್ಗೆ ತಲೆಕೆಡಿಸಿ ಕೊಳ್ಳುವು ದಿಲ್ಲ. ಬಾಲ ಮಂದಿರದ ಅಧಿ ಕಾರಿ ಗಳೂ ದೂರು ಕೊಟ್ಟು ತಣ್ಣ ಗಾಗು ತ್ತಾರೆ. ನಾಪತ್ತೆ ಯಾಗಿ ಸಿಕ್ಕಿ ಬಿದ್ದ ಶೇ.85ರಷ್ಟು ಮಕ್ಕಳು ಹೊರ ರಾಜ್ಯಗಳಲ್ಲಿ ಬಾಲ ಕಾರ್ಮಿಕರಾಗಿದ್ದರು. ಸದ್ಯ ನಾಪತ್ತೆಯಾದ 119 ಮಕ್ಕಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿ ರಲಾರದು ಎನ್ನುತ್ತಾರೆ ಅವರು. ಇದೇ ಮಾದರಿಯಲ್ಲಿ ಇರುವ ಸಾಧ್ಯತೆ ಗಳಿವೆ ಎನ್ನುತ್ತಾರೆ ಸಿಬಂದಿಯೊಬ್ಬರು.

ತಪ್ಪಿಸಿಕೊಳ್ಳುವುದಕ್ಕೆ ಕಾರಣ :

  • ಡ್ರಗ್ಸ್‌ ವ್ಯಸನಕ್ಕೆ ಒಳಗಾಗಿ ತಪ್ಪಿಸಿಕೊಳ್ಳುತ್ತಾರೆ
  • ಸ್ನೇಹಿತರು, ಹೊರಗಿನವರ ಸೂಚನೆಯಂತೆ ಪರಾರಿ
  • ಸರಿಯಾಗಿ ಊಟ, ತಿಂಡಿ ಸಿಗದಿದ್ದಾಗ ಪರಾರಿ
  • ಲೈಂಗಿಕ ದೌರ್ಜನ್ಯ, ಬೆದರಿಕೆಯಿಂದ ನಾಪತ್ತೆ
  • ದೊಡ್ಡ ಮಕ್ಕಳ ಕೀಟಲೆಯಿಂದ ಬೇಸರ
  • ಮಕ್ಕಳ ಬಗ್ಗೆ ಕಾಳಜಿ ವಹಿಸದಿರುವುದು.

ಬಾಲಮಂದಿರದಲ್ಲಿ ಸಿಬಂದಿ ಕೊರತೆ ಇದ್ದು, ನೇಮಕಕ್ಕೆ ಕ್ರಮ ಕೈಗೊಂಡಿದ್ದೇವೆ. ಬಾಲಕರ ಪತ್ತೆಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.ಹಾಲಪ್ಪ ಆಚಾರ್‌ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ

- ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next