Advertisement
ಜಿಎಸ್‌ಟಿ ಪರಿಹಾರ ಅವಧಿ ವಿಸ್ತರಿಸುವಂತೆ ಕರ್ನಾಟಕ ಸಹಿತ 12 ರಾಜ್ಯಗಳು ಮನವಿ ಮಾಡಿದ್ದವಾದರೂ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯು ಈ ಕುರಿತು ನಿರ್ಧಾರ ಕೈಗೊಳ್ಳಲಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Related Articles
ಇದೇ ವೇಳೆ ಕ್ಯಾಸಿನೋಗಳು, ಆನ್‌ಲೈನ್ ಗೇಮಿಂಗ್, ಕುದುರೆ ರೇಸ್ ಮತ್ತು ಲಾಟರಿಗಳ ಮೇಲೆ ಶೇ. 28 ಜಿಎಸ್‌ಟಿ ವಿಧಿಸುವ ಕುರಿತ ನಿರ್ಧಾರವನ್ನೂ ಜಿಎಸ್‌ಟಿ ಮಂಡಳಿ ಮುಂದೂಡಿದೆ.
Advertisement
ಕಡ್ಡಾಯ ನೋಂದಣಿ ನಿಯಮ ರದ್ದುಸಣ್ಣ ಆನ್‌ಲೈನ್ ಮಾರಾಟಗಾರರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಜಿಎಸ್‌ಟಿ ಮಂಡಳಿ ತೆಗೆದುಹಾಕಿದೆ. 40 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ವಹಿ ವಾಟು ಹೊಂದಿರುವ ಆನ್‌ಲೈನ್ ರಿಟೇಲರ್‌ಗಳು ರಾಜ್ಯದೊಳಗೆ ನಡೆಸುವ ವಹಿವಾಟಿಗೆ ಜಿಎಸ್‌ಟಿ ನೋಂದಣಿ ಮಾಡಬೇಕಾದ ಅಗತ್ಯವಿಲ್ಲ. 2023ರ ಜ. 1ರಿಂದ ಇದು ಜಾರಿಯಾಗಲಿದೆ. ಇದರಿಂದ 1.20 ಲಕ್ಷ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಪ್ರಮುಖ ನಿರ್ಧಾರಗಳು
01 ಸಣ್ಣ ಆನ್‌ಲೈನ್ ವ್ಯಾಪಾರಿಗಳ ನೋಂದಣಿ ಕಡ್ಡಾಯ ನಿಯಮ ರದ್ದು
02 ಜಿಎಸ್‌ಟಿ ಸೆಸ್ ಸಂಗ್ರಹ 2026ರ ವರೆಗೆ ಸಾಲ ಮರುಪಾವತಿಗೆ ಬಳಕೆ
03 ಕೆಲವು ಉತ್ಪನ್ನಗಳ ಜಿಎಸ್‌ಟಿ ದರ ಬದಲಾವಣೆಗೆ ಅಸ್ತು; ಜು. 18ರಿಂದ ಅನ್ವಯ
04 ದರ ಪರಿಷ್ಕರಣೆ ಪರಿಶೀಲಿಸುವ ಸಚಿವರ ಸಮಿತಿಯ ಅವಧಿ 3 ತಿಂಗಳು ವಿಸ್ತರಣೆ
05 ಕ್ಯಾಸಿನೋಗಳ ಮೇಲೆ ತೆರಿಗೆ ಕುರಿತು ಆ. 1ರ ಸಭೆಯಲ್ಲಿ ಚರ್ಚೆ
06 ರಾಜ್ಯದೊಳಗೆ ಚಿನ್ನ ಸಾಗಣೆಗೆ ಇ-ವೇ ಬಿಲ್ ಬಗ್ಗೆ ನಿರ್ಧಾರ ರಾಜ್ಯಗಳಿಗೆ ಬಿಟ್ಟದ್ದು