Advertisement
2021-22ನೇ ಸಾಲಿನ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ 1,779 ಕೋಟಿ ರೂ. ಲಾಭ ಗಳಿಸಿತ್ತು. ಬಡ್ಡಿಯಿಂದ ಮೂಲಕ ಗಳಿಸುವ ಆದಾಯ ಶೇ.33.8 ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶೇ.52 ಬೆಳವಣಿಗೆ ದಾಖಲಿಸಿದೆ. ಮಾ.31ರಂದು ಮುಕ್ತಾಯವಾದ 2022-23ನೇ ಸಾಲಿನ ನಾಲ್ಕನೇ ತ್ತೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ತೈಲಕಂಪನಿಗೆ 10, 841 ಕೋಟಿ ರೂ. ಲಾಭ ಸಿಕ್ಕಿದೆ. 2021-22ನೇ ಸಾಲಿನ ಇದೇ ಅವಧಿಯಲ್ಲಿ 7,089 ಕೋಟಿ ರೂ. ಆಗಿತ್ತು. ನಿರ್ವಹಣೆ ವಿಭಾಗದಿಂದ ಕಂಪನಿಗೆ ಕಳೆದ ವರ್ಷದ ಮಾರ್ಚ್‌ನಿಂದ ಪ್ರಸಕ್ತ ವರ್ಷದ ಮಾರ್ಚ್ ಅವಧಿಯಲ್ಲಿ 2.3 ಲಕ್ಷ ಕೋಟಿ ರೂ. ಲಭಿಸಿದೆ. ಕಳೆದ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಶೇ.30 ಡಿವಿಡೆಂಡ್ ನೀಡಲೂ ಕಂಪನಿ ತೀರ್ಮಾನಿಸಿದೆ.