Advertisement

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ‌ಲ್ಲಿ 477 ತಿಮಿಂಗಿಲಗಳ ಸಾವು

12:53 AM Oct 13, 2022 | Team Udayavani |

ವೆಲ್ಲಿಂಗ್ಟನ್‌: ಸಮುದ್ರದಲ್ಲಿ ಈಜಾಡಿಕೊಂಡಿದ್ದ ನೂರಾರು ತಿಮಿಂಗಿಲಗಳು ಏಕಾಏಕಿ ಸಾವನ್ನಪ್ಪಿ ದಡ ಸೇರಿರುವ ಘಟನೆ ನ್ಯೂಜಿಲೆಂಡ್‌ನ‌ಲ್ಲಿ ನಡೆದಿದೆ.

Advertisement

ಎರಡು ಕಡಲ ದಡಗಳಲ್ಲಿ ಒಟ್ಟು 477 ತಿಮಿಂಗಿಲಗಳ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ತುಪುವಂಗಿ ಬೀಚ್‌ನಲ್ಲಿ ಇತ್ತೀಚೆಗೆ 232 ತಿಮಿಂಗಿಲಗಳು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅದಾದ ಮೂರೇ ದಿನಗಳಲ್ಲಿ ವೈಹೆರೆ ಬೀಚ್‌ನಲ್ಲಿ 245 ತಿಮಿಂಗಿಲಗಳ ದೇಹ ಪತ್ತೆಯಾಗಿದೆ.

ನೈಸರ್ಗಿಕ ಸಂಪತ್ತಾಗಿರುವ ತಿಮಿಂಗಿಲಗಳು ಈ ರೀತಿಯಲ್ಲಿ ನಿರ್ದಿಷ್ಟ ಕಾರಣವಿಲ್ಲದೆ ಸಾವನ್ನಪ್ಪುತ್ತಿರುವುದು ಆತಂಕ ಮೂಡಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next