Advertisement

ಇಂದು ದಿಲ್ಲಿಯಲ್ಲಿ ಜಿಎಸ್‌ಟಿ ಮಂಡಳಿ ಸಭೆ

11:38 PM Dec 30, 2021 | Team Udayavani |

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ 46ನೇ ಸಭೆ ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ.

Advertisement

ಈ ವೇಳೆ ಉಡುಗೆ ಮತ್ತು ಪಾದರಕ್ಷೆ ಮೇಲಿನ ಜಿಎಸ್‌ಟಿಯನ್ನು ಏರಿಕೆ ಮಾಡುವ ನಿರ್ಧಾರವನ್ನು ಮುಂದೂಡಿಕೆ ಮಾಡುವ ಸಾಧ್ಯತೆ ಇದೆ. ತೆರಿಗೆ ಪದ್ಧತಿಯಲ್ಲಿ ತರಬೇಕಾಗಿರುವ ಬದಲಾವಣೆ ಮತ್ತು ದರ ಪರಿಷ್ಕರಣೆಯ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಸುವ ಸಾಧ್ಯತೆಗಳು ಇವೆ. ಅದಕ್ಕೆ ಪೂರಕವಾಗಿ  ಜಿಎಸ್‌ಟಿ ಪರಿಹಾರ ಸೆಸ್‌ ನೀಡಿಕೆ ಮತ್ತು ಕೇಂದ್ರ ರಾಜ್ಯ ಸರಕಾರ‌ಗಳಿಗೆ ತೆರಿಗೆಯಲ್ಲಿ ನೀಡಬೇಕಾಗಿರುವ ಪಾಲಿನ ವಿತರಣೆಯನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಬೇಕು ಎಂದು ರಾಜ್ಯಗಳು ಮನವಿ ಮಾಡಿವೆ.

ವ್ಯಾಟ್‌ ಸೇರಿದಂತೆ ಸ್ಥಳೀಯ ತೆರಿಗೆಗಳು ರಾಜ್ಯ ಸರಕಾರ‌ಗಳು ವಿಧಿಸುತ್ತಿದ್ದು, ಮುಂದಿನ ವರ್ಷದ ಜೂನ್‌ಗೆ ಮುಕ್ತಾಯವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next