ಬುಕಾರೆಸ್ಟ್: ಶನಿವಾರ ರಾಜಧಾನಿ ಬುಕಾರೆಸ್ಟ್ ಬಳಿಯ ರೊಮೇನಿಯನ್ ಪಟ್ಟಣವಾದ ಕ್ರೆವೆಡಿಯಾದಲ್ಲಿ ಪೆಟ್ರೋಲಿಯಂ ಗ್ಯಾಸ್ ಸ್ಟೇಷನ್‌ನಲ್ಲಿ ಎರಡು ಸ್ಫೋಟಗಳು ಸಂಭವಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು 46 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೊದಲ ಸ್ಫೋಟದಿಂದ ಬೆಂಕಿ ಗ್ಯಾಸ್ ಸ್ಟೇಷನ್ ನ ಎರಡು ಟ್ಯಾಂಕ್‌ಗಳಿಗೆ ಮತ್ತು ಹತ್ತಿರದ ಮನೆಗಳಿಗೆ ಹರಡಿತು, ಇದರಿಂದಾಗಿ ಹೆಚ್ಚಿನ ಜನ ಗಾಯಗೊಂಡರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಸುಮಾರು 700 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸಂಚಾರ ನಿರ್ಬಂಧಿಸಲಾಯಿತು ಎಂದು ಹೇಳಿದೆ.
ಇತ್ತ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಜೆ ವೇಳೆಗೆ ಎಲ್‌ಪಿಜಿ ಸ್ಟೇಷನ್‌ನಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು ಇದರಿಂದ 26 ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತುರ್ತು ಪ್ರತಿಕ್ರಿಯೆ ಘಟಕದ ಉಸ್ತುವಾರಿ ವಹಿಸಿರುವ ಉಪ ಆಂತರಿಕ ಸಚಿವ ರೇದ್ ಅರಾಫತ್ ಸುದ್ದಿಗಾರರಿಗೆ ಮಾಹಿತಿ ರವಾನಿಸಿದ್ದಾರೆ.
46 ಮಂದಿ ಗಾಯಗೊಂಡವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಘಟನೆ ಕುರಿತು ಪ್ರಧಾನಿ ಮಾರ್ಸೆಲ್ ಸಿಯೊಲಾಕು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ತೊಡಗಿರುವ ರಾಜ್ಯ ಏಜೆನ್ಸಿಗಳೊಂದಿಗೆ ತುರ್ತು ಸಭೆ ನಡೆಸಿ ಗಂಭೀರ ಸ್ಥಿತಿಯಲ್ಲಿರುವ ನಾಲ್ವರನ್ನು ನಾಲ್ವರು ರೋಗಿಗಳನ್ನು ಇಂದು ರಾತ್ರಿ ಇಟಲಿ ಮತ್ತು ಬೆಲ್ಜಿಯಂನ ಆಸ್ಪತ್ರೆಗಳಿಗೆ ವರ್ಗಾಯಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಈಗಾಗಲೇ ಸುಮಾರು 25 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು, ಆದರೆ ಇನ್ನೂ ಬೆಂಕಿಯನ್ನು ನಂದಿಸಲಾಗಿಲ್ಲ. ಸೈಟ್‌ನಲ್ಲಿ ಮೂರನೇ ಟ್ಯಾಂಕ್ ಅಪಾಯವನ್ನುಂಟುಮಾಡುವುದರಿಂದ ಹೆಚ್ಚಿನ ಸ್ಫೋಟಗಳು ಸಂಭವಿಸಬಹುದು ಎಂದು ಅರಾಫತ್ ಹೇಳಿದರು.
ಇದನ್ನೂ ಓದಿ: Central Govt ಹೊಸ ಮಾರ್ಗಸೂಚಿ ಬರುವವರೆಗೂ ಈ ಬಾರಿ ಮರಳು ತೆಗೆಯುವಂತಿಲ್ಲ