ಕೊಪ್ಪಳದ ಎಪಿಎಂಸಿಯ ಟ್ರೇಡರ್ಸ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 457 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು 10ಕ್ಕೂ ಹೆಚ್ಚು ಜನರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಕೊಪ್ಪಳದಲ್ಲಿ ರಾಜ್ಯ ಸರ್ಕಾರದಿಂದ ಬಡವರಿಗೆ ನೀಡುವ ಪಡಿತರವನ್ನು ಕೆಲವು ಕುಟುಂಬಗಳು ಹಣಕ್ಕಾಗಿ ಮಾರಿಕೊಳ್ಳುತ್ತಿದ್ದು, ಕೆಲವರು ಇದನ್ನೇ ಒಂದು ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಕೊಪ್ಪಳದ ಎಪಿಎಂಸಿಯ ಕೆಲವು ಅಂಗಡಿಗಳಲ್ಲಿ ಇದು ಭರ್ಜರಿಯಾಗಿ ನಡೆಯುತ್ತಿದೆ. ಈ ಮಾಹಿತಿ ಆಧಾರಿಸಿ ಆಹಾರ ಇಲಾಖೆ ಅಧಿಕಾರಿಗಳು ಎಪಿಎಂಸಿಯ ಕಿರಣ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದಾಗ 40 ಕೆಜಿ ತೂಕದ 24 ಪಾಕ್ಯೆಟ್‌ನ ಪಡಿತರ ಪತ್ತೆಯಾಗಿದೆ. ಇದಕ್ಕೆ ಸಂಬಂಧಿ ಸಿದಂತೆ ಅಂಗಡಿ ಮಾಲೀಕನ ಮೇಲೂ ಕೇಸ್ ಮಾಡಿದ್ದು, ಬುಲೆರೋ ವಾಹನ ಹಾಗೂ ಪಡಿತರ ವಶಕ್ಕೆ ಪಡೆಯಲಾಗಿದೆ.
Advertisement
ಇನ್ನೂ ತಾಲೂಕಿನ ಹೊಸ ಗೊಂಡಬಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆಹಾರ ಇಲಾಖೆ, ಪೊಲೀಸ್ ಹಾಗೂ ತಹಶೀಲ್ದಾರ್ ತಂಡ ದಾಳಿ ನಡೆಸಿದ್ದು, ದಾಳಿ ವೇಳೆ 448.7ಕ್ವಿಂಟಲ್‌ನಷ್ಟು ಸರ್ಕಾರದ ಪಡಿತರವನ್ನು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂಡಬಾಳ ಗ್ರಾಮದ ಪ್ರಭಾಕರ ಭಜೇಂತ್ರಿ, ಕರಿಯಪ್ಪ ಭಜೇಂತ್ರಿ, ನಾಗಪ್ಪ
ಭಜೇಂತ್ರಿ, ಸೋಮವ್ವ, ಹುಲಿಗೆಮ್ಮ, ಫಕೀರಪ್ಪ, ಮಂಜುನಾಥ, ಗ್ಯಾನಪ್ಪ, ಫಕೀರವ್ವ, ಚೆನ್ನವ್ವ ಭಜೇಂತ್ರಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇದಲ್ಲದೇ ಮೇ 6ರಂದು ಗದಗ ಜಿಲ್ಲೆಯ ಕಳಸಾಪುರ ರಿಂಗ್ ರೋಡ್ ರಸ್ತೆಯಲ್ಲಿ 600 ಪಡಿತರ ಚೀಲ ವಶಕ್ಕೆ ಪಡೆದಿದ್ದು, ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಡಿತರದಾರ ಆಹಾರ ಧಾನ್ಯಗಳನ್ನು ಪಡಿತರ ಚೀಟಿದಾರರು ಯಾವುದೇ
ಕಾರಣಕ್ಕೂ ಪಡಿತರವನ್ನು ದುರುಪಯೋಗ ಪಡೆಸಿಕೊಳ್ಳುವಂತಿಲ್ಲ. ಅಕ್ರಮವಾಗಿ ಮಾರಾಟ ಮಾಡತಕ್ಕದ್ದಲ್ಲ. ಒಂದು ವೇಳೆ ಅಕ್ರಮವಾಗಿ ಪಡಿತರ ಮಾರಾಟ ಮಾಡಿದರೆ ಅವರ ಮೇಲೆ
ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.