Advertisement

457 ಜಿಂದಾಲ್‌ ನೌಕರರಿಗೆ ಕೋವಿಡ್‌ ಸೋಂಕು

10:19 AM Jul 06, 2020 | Suhan S |

ಬಳ್ಳಾರಿ: ಗಣನೀಯ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಶೇ. 40ರಷ್ಟು 457 ಸೋಂಕಿತರು ಜಿಂದಾಲ್‌ ಕೈಗಾರಿಕೆ ನೌಕರರು ಮತ್ತು ಕಾರ್ಮಿಕರಾಗಿದ್ದಾರೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ.

Advertisement

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಸೋಂಕಿತರ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು. ಮುಂಬೈ ಮತ್ತು ಇತರೆ ರಾಜ್ಯಗಳಿಂದ ಆಗಮಿಸಿದ್ದ ಕೆಲವರಿಗೆ ಪಾಸಿಟಿವ್‌ ಬಂದಿದ್ದರಿಂದ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಯಿತು. ಆದರೆ, ಜಿಂದಾಲ್‌ ಕಾರ್ಖಾನೆಯಲ್ಲಿ ಸೋಂಕು ಆವರಿಸಿದ ಬಳಿಕ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆರಂಭದಲ್ಲಿ ಕೇವಲ 13ರಿಂದ 20ರೊಳಗೆ ಇದ್ದ ಸೋಂಕಿತರ ಸಂಖ್ಯೆ ಇದೀಗ 1200ರ ಗಡಿ ದಾಟಿದೆ. ರಾಜ್ಯದಲ್ಲೇ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಬಳ್ಳಾರಿ ಬಂದು ನಿಂತಿದೆ.  ಇದರಲ್ಲಿ ಸುಮಾರು ಶೇ. 40ರಷ್ಟು 457 ಸೋಂಕಿತರು ಜಿಂದಾಲ್‌ ಕೈಗಾರಿಕೆಯ ನೌಕರರು ಮತ್ತವರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಜಿಲ್ಲೆಯಲ್ಲಿ ಈ ವರೆಗೆ (ಶನಿವಾರದ ವರದಿ) 1168 ಜನರಿಗೆ ಸೋಂಕು ಆವರಿಸಿದ್ದು, 524 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 610 ಸಕ್ರಿಯ ಪ್ರಕರಣಗಳಾಗಿದ್ದು, ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿ, ಸಂಡೂರು, ಕೊಪ್ಪಳ, ಹೊಸಪೇಟೆ, ಹಡಗಲಿ, ಕೂಡ್ಲಿಗಿಯ 6 ಜನ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 37 ಜನರು, ದುರ್ಬಲ ವರ್ಗದ ಮೂವರಿಗೆ ಸೋಂಕು ಆವರಿಸಿದೆ. ಜಿಲ್ಲೆಯ ಸಂಡೂರಿನ ದೌಲತ್‌ಪುರ ರಸ್ತೆಯ ಆಶ್ರಯ ಕಾಲೋನಿಯ ತಂದೆ ಮಗಳಿಗೆ ಕೋವಿಡ್‌ ಸೋಂಕು ಆವರಿಸಿರುವುದು ದೃಢಪಟ್ಟಿದೆ. ಸೋಂಕಿತ 42 ವರ್ಷದ ವ್ಯಕ್ತಿ ಮತ್ತವರ 12 ವರ್ಷದ ಮಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಹಡಗಲಿಯ 17ನೇ ವಾರ್ಡ್‌ ನಿವಾಸಿ 37 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂಜಿನೀಯರ್‌ ಆಗಿದ್ದ ಇವರಿಗೆ ಮದುವೆಗೆ ಬಂದಾಗ ಸೋಂಕು ಕಾಣಿಸಿಕೊಂಡಿದ್ದು, ತಪಾಸಣೆ ಮಾಡಿಸಿದಾಗ ಪಾಸಿಟಿವ್‌ ಬಂದಿದೆ. ಇದೀಗ ಸೋಂಕಿತರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next