Advertisement

ಥಾಣೆಯಲ್ಲಿ 4,507 ಅಪಾಯಕಾರಿ ಕಟ್ಟಡಗಳು

02:18 PM May 10, 2019 | Team Udayavani |

ಥಾಣೆ : ನಗರದಲ್ಲಿ ಸುಮಾರು 4,507 ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿವೆ ಎಂದು ಥಾಣೆ ಮಹಾನಗರ ಪಾಲಿಕೆಯು ನಡೆಸಿದ ಸಮೀಕ್ಷೆ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 198 ಕಟ್ಟಡಗಳು ಇಳಿಕೆಯಾಗಿದ್ದು, ಕಳೆದ ಬಾರಿ 4,705 ಕಟ್ಟಡಗಳು ಅಪಾ ಯಕಾರಿ ಎಂದು ಗುರುತಿಸಲ್ಪಟ್ಟಿತ್ತು.

Advertisement

ಮಾನ್ಸೂನ್‌ ಮೊದಲು ಪ್ರತಿವರ್ಷ ನಗರದಲ್ಲಿ ಅಪಾಯಕಾರಿ ಕಟ್ಟಡಗಳ ಸಮೀಕ್ಷೆಯನ್ನು ಥಾಣೆ ಪುರಸಭೆಯು ನಡೆಸುತ್ತಿದ್ದು, ನಾವು ಎಲ್ಲಾ ವಾರ್ಡ್‌ಗಳಿಂದ ಅಪಾಯಕಾರಿ ಕಟ್ಟಡಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮೀಕ್ಷೆಯ ಪ್ರಕಾರ ನಗರದಲ್ಲಿ 4,507 ಅಪಾಯಕಾರಿ ಕಟ್ಟಡಗಳಿವೆ. ಅದರಲ್ಲಿ ಸಿ-1 ವರ್ಗದಲ್ಲಿ 103 ಕಟ್ಟಡಗಳು ಅತ್ಯಂತ ಅಪಾಯದ ಸ್ಥಿತಿಯಲ್ಲಿವೆ. ಸಿ-2ಎ ವರ್ಗದಲ್ಲಿರುವ 98 ಕಟ್ಟಡಗಳು ಅಪಾಯಕಾರಿ, ಸಿ-2ಬಿ ಯಲ್ಲಿರುವ 2,297 ಕಟ್ಟಡಗಳು ರಿಪೇರಿಬಲ… ಮತ್ತು ಸಿ-3 ಯಲ್ಲಿರುವ 2,009 ಕಟ್ಟಡಗಳು ಸಣ್ಣ ದುರಸ್ತಿಯ ಹಂತದಲ್ಲಿದೆ ಎಂದು ವರ್ಗಿಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಅತ್ಯಂತ ಅಪಾಯಕಾರಿ ವಿಭಾಗಗಳಲ್ಲಿನ ಕಟ್ಟಡಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತ ಅಧಿಕವಾಗಿದ್ದು, ವಿಶೇಷವಾಗಿ ನಾವಾ³ಡಾ ಮತ್ತು ಕೋಪ್ರಿ ಪ್ರದೇಶಗಳಲ್ಲಿದೆ. ಮುಂಬ್ರಾ ಕೂಡ ಅತ್ಯಂತ ಹೆಚ್ಚಿನ ಅಪಾಯಕಾರಿ ಕಟ್ಟಡಗಳನ್ನು ಹೊಂದಿದೆ, ಆದರೂ ಅವುಗಳಲ್ಲಿ ಹೆಚ್ಚಿನವು ದುರಸ್ತಿ ಹಂತದಲ್ಲಿವೆ. ಮುಂಬ್ರಾದಲ್ಲಿ ಅತಿಹೆಚ್ಚು 1,441 ಸಂಖ್ಯೆಯ ಅಪಾಯಕಾರಿ ಕಟ್ಟಡಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಾಗ್ಲೆà ಎಸ್ಟೇಟ್‌ನಲ್ಲಿ 1,086 ಅಪಾಯಕಾರಿ ಕಟ್ಟಡಗಳನ್ನು ಹೊಂದಿದೆ. ಸಿ1 ಮತ್ತು ಸಿ2ಎ ವರ್ಗದಲ್ಲಿರುವ ಎಲ್ಲಾ ಕಟ್ಟಡಗಳ ನಿವಾಸಿಗಳನ್ನು ಮೇ 31 ರೊಳಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.

ಲೋಕಮಾನ್ಯ-ಸಾವರ್ಕರ್‌ ನಗರ ವಾರ್ಡ್‌ಗಳು ಹಳೆಯ ಥಾಣೆ ಪ್ರದೇಶವನ್ನು ಹೊಂದಿದ್ದು, ಈ ಪ್ರದೇಶಗಳಲ್ಲಿರುವ ಹೆಚ್ಚಿನ ಕಟ್ಟಡಗಳು ಈಗ 40ರಿಂದ 50 ವರ್ಷಕ್ಕಿಂತಲೂ ಹೆಚ್ಚು ಹಳೆಯದಾಗಿದೆ. ಹಳೆಯ ಕಟ್ಟಡಗಳ ಪುನರಾಭಿವೃದ್ಧಿಗಾಗಿ ಮಹಡಿ ಸ್ಥಳ ಸೂಚ್ಯಂಕ ಬಗ್ಗೆ ಯಾವುದೇ ಸ್ಪಷ್ಟತೆ ಇನ್ನೂ ಇಲ್ಲ, ಇದು ನಾವಾ³ಡಾ, ರಾಮ ಮಾರುತಿ ರಸ್ತೆ, ವಿಷ್ಣು ನಗರ, ಬಿ-ಕ್ಯಾಬಿನ್‌ ಮತ್ತು ಪಂಚಪಕಾಡಿ ಪ್ರದೇಶಗಳಲ್ಲಿನ ಹೆಚ್ಚಿನ ಪುನರಾಭಿವೃದ್ಧಿಗೆ ಕಾರಣವಾಗಿದೆ ಎನ್ನಲಾಗಿದೆ.

ಮಾಲೀಕರು, ಬಾಡಿಗೆದಾರರು ಮತ್ತು ಡೆವಲಪರ್ಗಳ ನಡುವಿನ ಸಂಘರ್ಷದಿಂದಾಗಿ ಹೆಚ್ಚಿನ ಹಳೆಯ ಕಟ್ಟಡಗಳು ಅಪಾಯ ಕಾರಿಯಾಗಿದ್ದು, ಇದಲ್ಲದೆ, ಕಟ್ಟಡಗಳ ನಿವಾಸಿಗಳಿಗೆ ಪರ್ಯಾಯ ವಸತಿ ಕೊರತೆಯಿಂದಾಗಿ ಈ ಪ್ರದೇಶದ ಪುನರಾಭಿವೃದ್ಧಿಗೆ ಸಹ ಸ್ಥಗಿತಗೊಂಡಿದೆ. ನಾವಾ³ಡಾದ ವಾರ್ಡ್‌ ಕಚೇರಿಯ ಪ್ರಕಾರ 46 ಕಟ್ಟಡಗಳ ಸ್ಥಳಾಂತರ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದು, 20 ಕಟ್ಟಡಗಳನ್ನು ಈಗಾಗಲೇ ಖಾಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಾವಾ³ಡಾ ನಗರವು 46 ಅತ್ಯಂತ ಅಪಾಯಕಾರಿ ಕಟ್ಟಡಗಳನ್ನು ಹೊಂದಿದ್ದು, ಅದರ ಅನಂತರ ವರ್ತಕ್‌ ನಗರದಲ್ಲಿ 20 ಮತ್ತು ಲೋಕಮಾನ್ಯ ಸಾವರ್ಕರ್‌ ನಗರದಲ್ಲಿ 15 ಅಪಾಯಕಾರಿ ಕಟ್ಟಡಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಾನ್ಸೂನ್‌ ಮೊದಲು ಸಿ-1 ಮತ್ತು ಸಿ-2ಎ ವಿಭಾಗದಲ್ಲಿ 200ಕ್ಕೂ ಹೆಚ್ಚಿನ ಕಟ್ಟಡಗಳನ್ನು ಸ್ಥಳಾಂತರಿಸಬೇಕಾಗದ ಅಗತ್ಯವಿದ್ದು, ಸ್ಥಳಾಂತರ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ, ಸಿ-1 ವರ್ಗದ ಎÇÉಾ ಕಟ್ಟಡಗಳನ್ನು ಜೂನ್‌ ಮೊದಲ ವಾರದ ಮೊದಲು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next