Advertisement

ಥಾಣೆಯ 4,507 ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿ

04:30 PM Jun 27, 2019 | Vishnu Das |

ಮುಂಬಯಿ: ಥಾಣೆ ಮನಪಾ ಪರಿಸರದಲ್ಲಿ ಸುಮಾರು 4,507 ಕಟ್ಟಡಗಳ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ಮಾಹಿತಿ ರಾಜ್ಯ ಸರಕಾರದ ವತಿಯಿಂದ ಮಂಗಳವಾರ ಸದನದಲ್ಲಿ ಹೇಳಲಾಗಿದೆ.

Advertisement

ಅಪಾಯಕಾರಿ ಕಟ್ಟಡಗಳಲ್ಲಿ ವಾಸಿಸುವ ಜನರ ಸ್ಥಳಾಂತರ ಹಾಗೂ ಕಟ್ಟಡಗಳ ಪುನರಾಭಿವೃದ್ಧಿಯ ಬಗ್ಗೆ ರಾಜ್ಯ ಸರಕಾರ ಯೋಜನೆ ಏನು ಎಂದು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರ ನೀಡಿದ ನಗರಾಭಿವೃದ್ಧಿ ರಾಜ್ಯಸಚಿವ ಯೋಗೇಶ್‌ ಸಾಗರ್‌, ಈ ಕುಟುಂಬಗಳಿಗಾಗಿ ಥಾಣೆ ಮನಪಾ ಸುಮಾರು 2,570 ಮನೆಗಳನ್ನು ಬಾಡಿಗೆಗೆ ಪಡೆಯಲಾಗಿದೆ.

ಅಂತೆಯೇ, ಅಂತಹ ಕಟ್ಟಡಗಳ ಕ್ಲಸ್ಟrರ್‌ ಅಭಿವೃದ್ಧಿಗಾಗಿ 10 ಸಾವಿರ ಚದರ ಅಡಿಗಳ ಭಾಗವಾಗಿದ್ದರೆ ಮಾತ್ರ 4 ಎಫ್‌ಎಸ್‌ಐ ನೀಡಲಾಗುತ್ತದೆ, ಒಂದುವೇಳೆ ಕಟ್ಟಡವು ಕ್ಲಸ್ಟರ್‌ಗಳಿಗೆ ಹೊಂದಿಕೆಯಾಗದಿದ್ದರೆ ಮತ್ತು ಕಟ್ಟಡದ ಸ್ಥಳವು 8000 ಚದರ ಅಡಿಗಳವರೆಗೆ ಇದ್ದರೂ ಕೂಡ ಕ್ಲಸ್ಟರ್‌ ಅಭಿವೃದ್ಧಿ ಮಾಡುವ ಬಗ್ಗೆ ನಿರ್ಧರಿಸುವ ಹಕ್ಕು ಮನಪಾದ ಆಯುಕ್ತರಿಗೆ ನೀಡಲಾಗಿದೆ ಎಂದು ಯೋಗೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next