ಕೆ.ಆರ್.ಪೇಟೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ತಾಲೂಕಿನ ಅಭಿವೃದ್ಧಿಗಾಗಿ ಸುಮಾರು 450ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಪಂ ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ ತಿಳಿಸಿದರು.
ತಾಲೂಕಿನ ಬೂಕನಕೆರೆ ಹೋಬಳಿಯ ಮರಟೀಕೊಪ್ಪಲು ಗ್ರಾಮದಿಂದ ಬೂಕಹಳ್ಳಿ ಕೊಪ್ಪಲಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಜೆಡಿಎಸ್ ನಾಯಕರಾದ ಎಚ್‌ಡಿಕೆ ಅವರು ರಾಜ್ಯದ ಅಭಿವೃದ್ಧಿಗಾಗಿ 14 ತಿಂಗಳು ಹಗಲು ರಾತ್ರಿ ಶ್ರಮಿಸಿದ್ದರು. ನಮ್ಮ ತಾಲೂಕಿನಲ್ಲಿರುವ ರಸ್ತೆಗಳ ಅಭಿವೃದ್ಧಿಗೆಂದು ಸುಮಾರು 150ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡಿ ದ್ದಾರೆ. ಇತರೆ ಅಭಿವೃದ್ಧಿ ಕಾಮಗಾರಿಗೂ ಕೋಟ್ಯಂತರ ರೂ., ಅನುದಾನ ನೀಡುವ ಮೂಲಕ ತಾಲೂಕಿನ ಮೇಲೆ ಅಭಿಮಾನವಿಟ್ಟಿದ್ದಾರೆ ಎಂದರು. ಸಾರ್ವ ಜನಿಕರ ತೆರಿಗೆ ಹಣದಿಂದ ನಡೆಯು ತ್ತಿರುವ ಕಾಮಗಾರಿಯನ್ನು ಗುತ್ತಿಗೆದಾ ರರು ಉತ್ತಮ ಗುಣಮಟ್ಟದಿಂದ ಕೈಗೊಳ್ಳುವ ಮೂಲಕ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಬೇಕು. ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ, ನೀರು, ವಿದ್ಯುತ್ ಸೌಲಭ್ಯ ಒದಗಿಸಿಕೊಟ್ಟರೆ ರೈತರು ಬೇರೆ ಏನನ್ನೂ ಕೇಳುವುದಿಲ್ಲ. ಹೀಗಾಗಿ ಗುತ್ತಿಗೆ ದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೆ ಸಹಿಸುವುದಿಲ್ಲ ಎಂದರು. ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಮುಖಂಡ ರಾದ ಹೆಳವೇಗೌಡ, ರಂಗರಾಜು, ಪೂವನಹಳ್ಳಿ ರೇವಣ್ಣ, ರಾಮಕೃಷ್ಣೇಗೌಡ, ಮಂಜೇ ಗೌಡ, ಧನಂಜಯ, ಲೋಕೇಶ್,