Advertisement
ಸೌಂದರ್ಯ, ಮಾದಕತೆಯ ಗಣಿಯಾಗಿದ್ದ ಈಕೆ ಹಾಲಿವುಡ್ ನಲ್ಲಿ ಸಂಚಲನ ಮೂಡಿಸಿ ಪ್ರೇಮ, ಮೋಹದ ಪಾಶದೊಳಕ್ಕೆ ಸಿಲುಕಿ ವೈಯಕ್ತಿಕ ಬದುಕನ್ನು ಸುಟ್ಟುಕೊಂಡು ಸಾಗುತ್ತಲೇ ನಿಗೂಢವಾಗಿ ಸಾವನ್ನಪ್ಪಿದ್ದಳು.
Related Articles
Advertisement
ಫೋಟೋಗ್ರಾಫರ್, ರೂಪದರ್ಶಿಯಾಗಿದ್ದ ಮನ್ರೋ 1950ಲ್ಲಿ ಅದೃಷ್ಟ ಕೈ ಹಿಡಿದಿತ್ತು. 1953ರ ಹೊತ್ತಿಗೆ ಹಾಲಿವುಡ್ ನ ಅತ್ಯಂತ ಬೇಡಿಕೆಯ ಸ್ಟಾರ್ ನಟಿ ಆಗಿಬಿಟ್ಟಿದ್ದಳು. ಆಕೆಯ ಮಾದಕ ನೋಟ, ವೈಯ್ಯಾರದ ಮೈಮಾಟಕ್ಕೆ ಹಾಲಿವುಡ್ ನಿರ್ಮಾಪಕರು ಮುಗಿಬಿದ್ದು ಸಿನಿಮಾದಲ್ಲಿ ನಟಿಸುವಂತೆ ಗೋಗರೆಯುತ್ತಿದ್ದರಂತೆ. ಇದರಿಂದಾಗಿ ಮನ್ರೋ 25ನೇ ವರ್ಷಕ್ಕೆ ಜಾಗತಿಕ ತಾರೆ ಪಟ್ಟ ಗಿಟ್ಟಿಸಿಕೊಂಡಿದ್ದಳು.
ನೋವು…ಅವಮಾನ:
ಮನ್ರೋ ತಾಯಿ ಮಾನಸಿಕವಾಗಿ ಜರ್ಜರಿತರಾಗಿದ್ದರು. ಅರೆಹುಚ್ಚಿಯಂತಾಗಿದ್ದ ಆಕೆ ಬಹುತೇಕ ಸಮಯವನ್ನು ಹುಚ್ಚಾಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನ ತಾಯಿ ಬಗ್ಗೆ ಮನ್ರೋ ಎಲ್ಲಿಯೂ ಹೇಳಿಕೊಂಡಿರಲಿಲ್ಲವಾಗಿತ್ತು. ತಂದೆ ಯಾರೆಂಬುದೇ ಗೊತ್ತಿಲ್ಲವಾಗಿತ್ತು. ಹಣಕ್ಕಾಗಿ ಆಕೆ ನಗ್ನ ಫೋಸ್ ಕೊಟ್ಟಿದ್ದಳು. ತನ್ನ ತಾಯಿ ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿರುವುದಾಗಿ ಮನ್ರೋ ಹೇಳಿಬಿಟ್ಟಿದ್ದಳು. ನಿಜ ವಿಷಯ ಏನೆಂದರೆ ಆಕೆ ಹುಚ್ಚಾಸ್ಪತ್ರೆಯಲ್ಲಿ ಜೀವಂತವಾಗಿದ್ದಳು. ಕೊನೆಗೂ ಆಕೆ ತಾನು ಯಾಕಾಗಿ ನಗ್ನ ಫೋಟೋ ತೆಗೆಯಲು ಅನುಮತಿ ಕೊಟ್ಟಿದ್ದೇನೆ ಎಂಬುದರ ಬಗ್ಗೆ ಬಾಯ್ಬಿಟ್ಟಿದ್ದಳು. ರಹಸ್ಯವಾಗಿ ರಕ್ಷಿಸುತ್ತಿದ್ದ ತಾಯಿ ಗ್ಲ್ಯಾಡೀಸ್ ಗಾಗಿ ಎಂದು ಹೇಳಿದ್ದಳು. ಆಕೆಯ ಚಿಕಿತ್ಸೆಗಾಗಿ ತನಗೆ ಹಣ ಬೇಕು ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಳು.
ಆ ಫೋಟೋ ಅತ್ಯಂತ ಜನಪ್ರಿಯವಾಗಿತ್ತು!
ಸ್ಯಾನ್ ಫ್ರಾನ್ಸಿಸ್ಕೋಗೆ ಓಡಿಬಂದ ಮನ್ರೋ ಹಾಗೂ ಜೊಯ್ ಡಿಮ್ಯಾಗಿಯೋ ಜೋಡಿ ವಿವಾಹವಾಗುತ್ತಾರೆ. ಆದರೆ ವಿಪರ್ಯಾಸ ಎಂಬಂತೆ 1954ರಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಆಕೆಯ ಸ್ಕರ್ಟ್ ಗಾಳಿಗೆ ಮೇಲಕ್ಕೆ ಹಾರೋದನ್ನು ಸಾರ್ವಜನಿಕವಾಗಿ ಚಿತ್ರೀಕರಿಸುತ್ತಿದ್ದರು. ಆ ಫೋಟೋವನ್ನು ಫೋಟೋಗ್ರಾಫರ್ಸ್ ಸೆರೆಹಿಡಿದಿದ್ದರು. ಆದರೆ ಇದು ಪತಿ ಜೊಯ್ ಗೆ ಆಕ್ರೋಶ ತಂದಿತ್ತು. ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆದು ಕೊನೆಗೆ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು. ಮನ್ರೋಳ ಆ ಫೋಟೋ ಇಂದಿಗೂ ಅತ್ಯಂತ ಜನಪ್ರಿಯಗೊಂಡಿದೆ.
1955ರಲ್ಲಿ ಮನ್ರೋ ನ್ಯೂಯಾರ್ಕ್ ನತ್ತ ಪ್ರಯಾಣ ಬೆಳೆಸಿ ಸ್ವಂತ ಸಿನಿಮಾ ಕಂಪನಿಯನ್ನು ಆರಂಭಿಸಿದ್ದಳು. ಅಲ್ಲಿ ಅರ್ಥುರ್ ಮಿಲ್ಲರ್ ಜೊತೆ ಡೇಟಿಂಗ್ ನಲ್ಲಿ ತೊಡಗಿ 1956ರಲ್ಲಿ ವಿವಾಹವಾಗುತ್ತಾರೆ.
ಅರ್ಥರ್ ಮೋಸ ಕೂಡಾ ಮನ್ರೋಗೆ ತಿಳಿಯುತ್ತೆ. ಹೀಗೆ ತಾನು ತಾಯಿಯಾಗಬೇಕೆಂಬ ಬಯಕೆಯೂ ಈಡೇರೋದಿಲ್ಲ. ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು ಕೂಡಾ ತಾಯಿಯೂ ಮಗಳ ವಿರುದ್ಧ ತಿರುಗಿ ಬೀಳುತ್ತಾರೆ. 1957ರ ನಂತರ ಕೆಲವು ವರ್ಷಗಳ ಕಾಲ ಭಾರೀ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾಳೆ. ಅತೀಯಾದ ಮದ್ಯಸೇವೆನೆಯ ದಾಸಿಯಾಗಿಬಿಟ್ಟಿದ್ದಳು.
ಜಾನ್ ಎಫ್ ಕೆನಡಿ ಪ್ರೇಯಸಿ, ಸಾವಿನ ರಹಸ್ಯ ಏನು?
ಮರ್ಲಿನ್ ಮನ್ರೋ ಕೇವಲ ನಟಿ, ಸ್ಟಾರ್ ಮಾತ್ರ ಆಗಿರಲಿಲ್ಲವಾಗಿತ್ತು. ಆಕೆಯ ಸ್ನೇಹಕ್ಕಾಗಿ ಪ್ರತಿಷ್ಠಿತ ಜನರು ಹಾತೊರೆಯುತ್ತಿದ್ದರು. ಆಕೆಯ ಗೆಳೆತನ ಕೂಡಾ ಭಾರೀ ಶ್ರೀಮಂತರ ಜೊತೆಗೆ ಇತ್ತು. ಅದರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಕೂಡಾ ಒಬ್ಬರಾಗಿದ್ದರು!
ಜಾನ್ ಎಫ್ ಕೆನಡಿ ಹಾಗೂ ಜಾನ್ ಕೆನಡಿಯ ಸಹೋದರ ರಾಬರ್ಟ್ ಕೆನಡಿ ಕೂಡಾ ಮನ್ರೋ ಜತೆ ಸಂಬಂಧ ಹೊಂದಿದ್ದರು ಎಂಬ ಥಿಯರಿಯನ್ನೂ ಹೇಳಲಾಗುತ್ತಿದೆ. ಹೀಗೆ ಕಿರಿಯ ಪ್ರಾಯದಲ್ಲೇ ಹೆಸರು, ಐಶ್ವರ್ಯ ಗಳಿಸಿದ್ದ ಮರ್ಲಿನ್ ಮನ್ರೋ ಎಂಬ ಚೆಲುವೆ 1962ರ ಜೂನ್ 5ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಆಗ ಆಕೆಯ ವಯಸ್ಸು 36! ಆದರೆ ಈವರೆಗೂ ಆಕೆಯ ಸಾವಿನ ಹಿಂದೆ ಕೆನಡಿ ಕುಟುಂಬ ಇದೆ ಎಂಬ ಊಹಾಪೋಹ ಹರಿದಾಡುತ್ತಲೇ ಇದೆ.
ಹೀಗೆ ಪ್ರೇಮ, ಮೋಹ, ಕಾಮ, ಡ್ರಗ್ಸ್, ಮಾದಕ ಪ್ರಪಂಚದೊಳಗೆ ಸುತ್ತಿ ಹಣದ ಸುಪ್ಪತ್ತಿಗೆಯಲ್ಲಿ ತೇಲಾಡಿದರೂ ಅವಮಾನ, ಅನುಮಾನಕ್ಕೊಳಗಾಗಿ ಕೊನೆಗೂ ನೋವು, ಮಾನಸಿಕ ಒತ್ತಡದಲ್ಲಿಯೇ ಅಂತ್ಯ ಕಂಡ ಮರ್ಲಿನ್ ಎಂಬ ಡ್ರೀಮ್ ಗರ್ಲ್ ನ ದುರಂತ ಕಥೆ.