Advertisement

ಲಷ್ಕರ್ ಕಮಾಂಡರ್ ಹತ್ಯೆ : ಜನವರಿಯಿಂದ ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರೆಷ್ಟು?

06:20 PM Apr 09, 2022 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾಪಡೆಗಳು ಉಗ್ರರ ಸಂಹಾರ ಮುಂದುವರೆಸಿದ್ದು,2022 ರ ಆರಂಭದಿಂದ ಇದುವರೆಗೆ 45 ಮಂದಿ ಉಗ್ರರನ್ನು ಹತ್ಯೆಗಿದಿರುವ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಶನಿವಾರ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಒಬ್ಬನನ್ನು ಅನಂತ್ ನಾಗ್ ಜಿಲ್ಲೆಯ ಶಿರ್ ಹಾಮಾ ಪ್ರದೇಶದಲ್ಲಿ ಹತ್ಯೆಗೈಯಲಾಗಿದೆ. ಪೋಲೀಸರ ಮಾಹಿತಿ ಪ್ರಕಾರ ಹತ್ಯೆಗೀಡಾದ ಕಮಾಂಡರ್ ನಿಸಾರ್ ದಾರ್ ಎನ್ನುವವನಾಗಿದ್ದಾನೆ. ಮುಂಜಾಗ್ರತಾ ಕ್ರಮವಾಗಿ ಅಂನತ್ ನಾಗ್ ನಲ್ಲಿ ಕೆಲ ಕಾಲ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿತ್ತು. ಕಾಶ್ಮೀರದ ಇತರ ಕಡೆಗಳಲ್ಲೂ ಸೇನಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಈ ವರ್ಷದ ಜನವರಿಯಿಂದ ಜೆ-ಕೆಯಲ್ಲಿ 45 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next