Advertisement

ಚಿಕ್ಕಬಳ್ಳಾಪುರಕ್ಕೂ ಎದುರಾಯಿತು ಮಹಾರಾಷ್ಟ್ರ ಕಂಟಕ: ಒಂದೇ ದಿನ 45 ಸೋಂಕು ಪ್ರಕರಣಗಳು

01:26 PM May 22, 2020 | keerthan |

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಆಘಾತ ನೀಡಿದ ಮಹಾರಾಷ್ಟ್ರ ನಂಜು ಈಗ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಗೂ ತಟ್ಟಿದೆ. ಒಂದೇ ದಿನ ಜಿಲ್ಲೆಯಲ್ಲಿ 45 ಮಂದಿ ಕೋವಿಡ್-19 ಸೋಂಕಿತರು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕು ನಾಗಲೋಟದಲ್ಲಿ ಸಾಗಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 71 ಕ್ಕೆ ಏರಿಕೆ ಕಂಡಿದೆ.

Advertisement

ಹಲವು ದಿನಗಳಿಂದ ಯಾವುದೇ ಕೋವಿಡ್-19 ಪಾಸಿಟೀವ್ ಪ್ರಕರಣಗಳು ಕಂಡು ಬರದೇ ನಿರಾಳವಾಗಿದ್ದ ಜಿಲ್ಲೆಯ ಜನರಲ್ಲಿ ಈಗ ಮಹಾರಾಷ್ಟ್ರದಿಂದ ಆಗಮಿಸಿರುವ 45 ನಾಗರಿಕರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿರುವುದು ಜಿಲ್ಲೆಯನ್ನು ಇನ್ನಷ್ಟು ಆತಂಕಕ್ಕೆ ಕಾರಣವಾಗಿದ್ದು ಮುಂಬೈ ನಂಜು ಎಲ್ಲಿಗೆ ಮುಟ್ಟುತ್ತದೆಯೆಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಡಿಲಿಕೆ ಬಳಿಕ ನೆರೆಯ ಮಹಾರಾಷ್ಟ್ರದಿಂದ ಬರೋಬ್ಬರಿ 265 ಮಂದಿ ನಾಗರಿಕರು ಆಗಮಿಸಿದ್ದ ಇವರ ಪೈಕಿ 45 ಕೋವಿಡ್ ಸೋಂಕು ದೃಢಪಟ್ಟಿದೆ. ಇವರೆಲ್ಲಾ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಿವಾಸಿಗಳೆಂದು ತಿಳಿದು ಬಂದಿದೆ. ಈ ಮೊದಲು ಗೌರಿಬಿದನೂರು ತಾಲೂಕಿನಲ್ಲಿ ಒಟ್ಟು 12 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಎಲ್ಲರೂ ಗುಣಮುಖರಾಗಿದ್ದರು. ಇದೀಗ ಮಹಾರಾಷ್ಟ್ರ ವಲಸಿಗರಿಂದ ಮತ್ತೆ ಗೌರಿಬಿದನೂರಲ್ಲಿ ಕೋವಿಡ್ ಕರಿಛಾಯೆ ತಲೆ ಎತ್ತಿದೆ.

ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿರುವ ಒಟ್ಟು 265 ಮಂದಿ ನಾಗರಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು ಈ ಪೈಕಿ 45  ಮಂದಿಯಲ್ಲಿ ಸೋಂಕು ದೃಢಪಟ್ಟು  67 ಮಂದಿಯ ವರದಿ ನೆಗೇಟಿವ್ ಬಂದಿದೆ. ಇನ್ನೂ ಇನ್ನೂ 153  ಮಂದಿ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next