Advertisement
ಚಿತ್ರದ ಬಗ್ಗೆ ಮಾತನಾಡುವ ಶಿವರಾಜ್ ಕುಮಾರ್, “ಈ ಚಿತ್ರದಲ್ಲಿ ನಾವು ಮೂವರು ನಟಿಸಿದ್ದೇವೆ. ಅವರು ಮುಂದು. ಇವರು ಮುಂದು ಅಂತ ಇಲ್ಲ. ಇಲ್ಲಿ ಎಲ್ಲರು ಒಂದೇ. ಉಪೇಂದ್ರ ಅವರ ಜೊತೆ ನಟಿಸಲು ನಾನು ಯಾವಾಗಲೂ ಸಿದ್ಧ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ನಟಿಸಿದ್ದು ಸಂತೋಷವಾಗಿದೆ. ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲಿಕ್ಕೆ ಆಗಲ್ಲ. ಅಷ್ಟು ಅದ್ಭುತ ನಿರ್ದೇಶನ ಅವರದು. ಅಷ್ಟೇ ಅದ್ಧೂರಿಯಾಗಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಾಹಸ ಸನ್ನಿವೇಶಗಳು ಅದ್ಭುತವಾಗಿವೆ. 45 ಇಡೀ ಭಾರತೀಯರೆ ಮೆಚ್ಚುವಂತಹ ಆ್ಯಕ್ಷನ್ ಚಿತ್ರವಾಗಲಿದೆ’ ಎಂದರು.
Related Articles
Advertisement
ನಿರ್ದೇಶಕ ಅರ್ಜುನ್ ಜನ್ಯಾ ಚಿತ್ರವನ್ನು ದೇವಸ್ಥಾನಕ್ಕೆ ಹೋಲಿಕೆ ಮಾಡುತ್ತಾರೆ. “ಶಿವರಾಜ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರ ಇದ್ದ ಹಾಗೆ. ರಮೇಶ್ ರೆಡ್ಡಿ ಅವರು ಈ ದೇವಸ್ಥಾನ ಕಟ್ಟಿದವರು. ಛಾಯಾಗ್ರಾಹಕ ಸತ್ಯ ಹೆಗಡೆ ಪ್ರಧಾನ ಅರ್ಚಕರು. ಹೀಗೆ ಇವರೆಲ್ಲರ ಸಹಕಾರದಿಂದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಮುಂದೆ ಸಿಜಿ ವರ್ಕ್ ಆರಂಭವಾಗಲಿದೆ ಎಂದರು.
ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಸಿನಿಮಾ ಆರಂಭವಾಗಿ 10 ದಿನಗಳವರೆಗೆ ಏನೋ, ಹೇಗೋ ಎಂಬ ಭಯ ಇತ್ತಂತೆ. ಆದರೆ, ಅರ್ಜುನ್ ಇಡೀ ಸಿನಿಮಾವನ್ನು ಅನಿಮೇಶನ್‌ನಲ್ಲಿ ಮಾಡಿದಂತೆ ಚಿತ್ರೀಕರಣ ಕೂಡಾ ಮಾಡಿದ್ದರಿಂದ ಧೈರ್ಯ ಬಂದು ಅರ್ಜುನ್ ಕೇಳಿದ್ದನ್ನೆಲ್ಲಾ ನೀಡಿದರಂತೆ. ಜೊತೆಗೆ ಪ್ರತಿ ದಿನ ಆದ ಚಿತ್ರೀಕರಣವನ್ನು ಕಳುಹಿಸಿಕೊಟ್ಟು ನಿರ್ಮಾಪಕರಿಗೆ ಧೈರ್ಯ ತುಂಬಿದರಂತೆ ಅರ್ಜುನ್. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ.