Advertisement
ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ವರದಿಯಾದ್ದ ಫಂಗಸ್ ಪ್ರಕರಣಗಳು ದಾವಣಗೆರೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿಯೂ ಕಾಣಿಸಿಕೊಂಡಿವೆ. ದಾವಣಗೆರೆಯಲ್ಲಿಯೂ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅಧಿಕೃತ ಫಲಿತಾಂಶ ಲಭ್ಯವಾಗಿಲ್ಲ. ಒಂದೇ ವಾರದಲ್ಲಿ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಳವಾಗಿವೆ. ಮೇ 17ರಂದು 98 ಇದ್ದು, ಸದ್ಯ 446ಕ್ಕೆ ಏರಿವೆ. ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗದೆ ಖಾಸಗಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಧಾರವಾಡದಲ್ಲಿ ನೂರರ ಸಮೀಪಕ್ಕೆ ಫಂಗಸ್ ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ.
ರಾಜ್ಯದಲ್ಲಿ ಪ್ರತೀ ವಾರ 400ಕ್ಕೂ ಹೆಚ್ಚು ಮಂದಿ ಬ್ಲ್ಯಾಕ್ ಫಂಗಸ್ ಕಾಯಿಲೆಗೆ ತುತ್ತಾಗಬಹುದೆಂದು ಅಂದಾಜಿಸಲಾಗಿದ್ದು, ಆಂಪೋಟೆರಿಸಿನ್-ಬಿ ಚುಚ್ಚುಮದ್ದಿನ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸ ಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರೋಗಿಗಳಿಗೆ 10ರಿಂದ 12 ದಿನ ಚಿಕಿತ್ಸೆ ನೀಡಬೇಕಿದ್ದು, ಪ್ರತೀ ದಿನ 4 ವಯಲ್‌ಗಳಂತೆ ಪ್ರತೀ ರೋಗಿಗೆ ಒಟ್ಟು 50 ವಯಲ್‌ಗಳ ಅಗತ್ಯವಿದೆ. ಈ ಆಧಾರದಲ್ಲಿ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಸರಕಾರ ಹೇಳಿದೆ.