Advertisement
ಫಾಸ್ಟ್ಯಾಗ್ ಕಡ್ಡಾಯವೆಂದು ಘೋಷಿಸುವ ವೇಳೆಗೆ ರಾಜ್ಯದಲ್ಲಿ ಶೇ. 19ರಷ್ಟು ವಾಹನಗಳು ಮಾತ್ರ ಇದನ್ನು ಅಳವಡಿಸಿಕೊಂಡಿದ್ದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿ.15ರಂದು ಫಾಸ್ಟ್ಯಾಗ್ ಹೊಂದಲು ಕೊನೆಯ ದಿನಾಂಕವೆಂದು ತಿಳಿಸಿತ್ತು. ಆದರೆ ಈ ವೇಳೆಗೆ ರಾಜ್ಯದಲ್ಲಿ ಕೇವಲ ಶೇ. 32ರಷ್ಟು ವಾಹನಗಳು ಫಾಸ್ಟ್ಯಾಗನ್ನು ಹೊಂದಿದ್ದವು. ಈ ಹಿನ್ನೆಲೆಯಲ್ಲಿ ಹಾಗೂ ಸ್ಟಿಕ್ಕರ್‌ಗಳು ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿರುವುದರಿಂದ ಅವಧಿಯನ್ನು ಜ. 15ರ ವರೆಗೆ ವಿಸ್ತರಿಸಲಾಯಿತು. ಡಿ.15ರಿಂದ 25ರ ವರೆಗೆ 10 ದಿನಗಳಲ್ಲಿ ಶೇ. 12ರಷ್ಟು ವಾಹನಗಳು ಫಾಸ್ಟ್ಯಾಗ್ ಹೊಂದಿವೆ.
ಪ್ರತಿದಿನ ಶೇ. 1.25ರಷ್ಟು ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಳ್ಳುತ್ತಿದ್ದು, ಜನವರಿ ವೇಳೆಗೆ ಶೇ. 50 ದಾಟುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರು, ಮೈಸೂರು ಭಾಗ ಗಳಲ್ಲಿ ಹೆಚ್ಚಿನ ವಾಹನಗಳು ಹೊಸ ತಂತ್ರಜ್ಞಾನ ಅಳ ವಡಿಸಿಕೊಂಡಿವೆ. ಜ. 15ರ ವೇಳೆಗೆ ಬಹುತೇಕ ವಾಹನಗಳು ಫಾಸ್ಟಾ éಗ್ ಹೊಂದಿರಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Related Articles
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ 8,500ಕ್ಕೂ ಅಧಿಕ ಬಸ್‌ಗಳಲ್ಲಿ ಶೇ. 40ರಷ್ಟು ಬಸ್‌ಗಳು ಟೋಲ್ ಮೂಲಕ ಸಂಚರಿಸಲಿವೆ. ಟೋಲ್ ಮೂಲಕ ಹೋಗುವ ಶೇ. 95ರಷ್ಟು ಬಸ್‌ಗಳಿಗೆ ಹಚ್ಚಲಾಗಿದೆ. ಜ. 15ರ ವರೆಗೆ ಸಮಯ ಇರುವುದರಿಂದ ಉಳಿದ ಬಸ್‌ಗಳಿಗೂ ಶೀಘ್ರವೇ ಸ್ಟಿಕ್ಕರ್ ಅಂಟಿಸಲಾಗುವುದು. ಟೋಲ್‌ಗಾಗಿ ನಿಗಮದಲ್ಲಿ 60 ಕೋಟಿ ರೂ. ಮೀಸಲಿಡಲಾಗಿದೆ ಎಂದು ನಿಗಮದ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.
Advertisement
ಜನರ ಮನಃಸ್ಥಿತಿ ಬದಲಾಗುತ್ತಿದ್ದು, ಡಿ.15ರ ಅನಂತರ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳುತ್ತಿದ್ದಾರೆ. ಈ ತಂತ್ರಜ್ಞಾನ ಸುಗಮ ಸಂಚಾರಕ್ಕೆ ಅನುಕೂಲಕರ ವಾಗಿದೆ.– ಬಿ.ಟಿ. ಶ್ರೀಧರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಜ್ಯ ಯೋಜನಾ ನಿರ್ದೇಶಕ - ಮಂಜುನಾಥ ಗಂಗಾವತಿ