Advertisement

ದೇಶದಲ್ಲಿ 44 ಲಕ್ಷ ಡೋಸ್ ಲಸಿಕೆ ವ್ಯರ್ಥ: ತಮಿಳುನಾಡು ಪ್ರಥಮ

11:59 PM Apr 20, 2021 | Team Udayavani |

ಹೊಸ ದಿಲ್ಲಿ : ಲಸಿಕೆ ಕೊರತೆ ಕೂಗಿನ ನಡುವೆ “ಲಸಿಕೆ ವ್ಯರ್ಥ’ ತಲೆನೋವಾಗಿ ಪರಿಣಮಿಸಿದೆ. ಎಪ್ರಿಲ್‌ 11ರವರೆಗೆ ಭಾರತದಲ್ಲಿ 10 ಕೋಟಿ ಡೋಸ್‌ಗಳ ಪೈಕಿ ಬರೋಬ್ಬರಿ 44 ಲಕ್ಷ ಡೋಸ್‌ ಲಸಿಕೆ ವ್ಯರ್ಥಗೊಳಿಸಿರುವುದು ಆರ್‌ಟಿಐ ಅರ್ಜಿಗೆ ಕೇಂದ್ರ ನೀಡಿದ ಉತ್ತರದಿಂದ ತಿಳಿದುಬಂದಿದೆ.

Advertisement

ಈ ಪೈಕಿ ತಮಿಳುನಾಡು ಮುಂಚೂಣಿಯಲ್ಲಿದ್ದು, ಅಲ್ಲಿ ಶೇ.12ರಷ್ಟು ಲಸಿಕೆ ವ್ಯರ್ಥವಾಗಿದೆ. ಬಳಿಕ ಹರಿಯಾಣ (ಶೇ.9.74), ಪಂಜಾಬ್‌ (ಶೇ.8.2), ಮಣಿಪುರ (ಶೇ.7.8), ತೆಲಂಗಾಣ (ಶೇ.7.55) ನಂತರದ ಸ್ಥಾನದಲ್ಲಿವೆ.

ಇಲ್ಲೆಲ್ಲ ಕಡಿಮೆ ವ್ಯರ್ಥ: ಲಸಿಕೆಯನ್ನು ಕನಿಷ್ಠ ಪ್ರಮಾಣದಲ್ಲಿ ವ್ಯರ್ಥಗೊಳಿಸಿದ ರಾಜ್ಯಗಳ ಪೈಕಿ ಕೇರಳ, ಪ. ಬಂಗಾಲ, ಹಿಮಾಚಲ ಪ್ರದೇಶ, ಮಿಝೋರಾಂ, ಗೋವಾ, ದಾಮನ್‌ ಮತ್ತು ದಿಯು, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷ ದ್ವೀಪಗಳು ಮುಂಚೂಣಿಯಲ್ಲಿವೆ.

ಇದನ್ನೂ ಓದಿ :ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ತಳಿ ಹಾವಳಿ: ಕೊರೊನಾದ ಭಾರತದ ತಳಿ ಇಸ್ರೇಲ್‌ ಪ್ರವೇಶಿಸಿದ್ದು, ಪ್ರತೀ 7 ಸೋಂಕಿತರಲ್ಲಿ ಒಬ್ಟಾತನಲ್ಲಿ ಭಾರತೀಯ ರೂಪಾಂತರಿ ದೃಢಪಡುತ್ತಿದೆ ಎಂದು ಆರೋಗ್ಯ ಇಲಾಖೆ ಆತಂಕವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕೆ ಫೈಜರ್‌/ ಬಯಾನ್‌ಟೆಕ್‌ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಅಂತಲೂ ಅಭಿಪ್ರಾಯಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next