Advertisement

ಆರ್ಟಿಕಲ್ 370 ರದ್ದತಿ ಬಳಿಕ ಕಾಶ್ಮೀರದಲ್ಲಿ ಭಾರಿ ಸಂಖ್ಯೆಯ ಉಗ್ರರ ಹತ್ಯೆ : ಮಾಹಿತಿ

12:28 PM Feb 02, 2022 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ನಂತರ 439 ಭಯೋತ್ಪಾದಕರ ಹತ್ಯೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

Advertisement

ರಾಜ್ಯಸಭೆಯಲ್ಲಿ ರಾಜ್ಯಖಾತೆಯ ಸಚಿವ ನಿತ್ಯಾನಂದ ರೇ ಅವರು ಈ ಮಾಹಿತಿ ನೀಡಿದ್ದು, ಸೇನಾಪಡೆಗಳು ಕಾರ್ಯಾಚರಣೆ ನಡೆಸಿ 439 ಉಗ್ರರನ್ನು ಹತ್ಯೆಗೈದಿರುವ ಬಗ್ಗೆ ವಿವರ ನೀಡಿದರು.

ಈ ಅವಧಿಯಲ್ಲಿ 98 ನಾಗರಿಕರು ಮತ್ತು 109 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 541 ಭಯೋತ್ಪಾದಕ ಘಟನೆಗಳು ವರದಿಯಾಗಿವೆ ಎಂದು ತಿಳಿಸಿದರು.

ಓರ್ವ ಉಗ್ರನ ಹತ್ಯೆ

ಶೋಪಿಯಾನ್ ನಡಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ ಎನ್ಕೌಂಟರ್ ನಡೆದಿದ್ದು, ಒಬ್ಬ ಭಯೋತ್ಪಾದಕ ಹತ್ಯೆ ಯಾಗಿದ್ದಾನೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next