Advertisement
ಮಂಗಳೂರಿನಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ ತನಿಖೆ ನಿರ್ದೇಶನಾಲಯದ ಮಂಗಳೂರು ಘಟಕದ ನೂತನ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನ. 8ರಿಂದ ರೂಪಾಯಿ ಅಪಮೌಲಿÂàಕರಣದ ಬಳಿಕ ಆದಾಯ ತೆರಿಗೆ ಇಲಾಖೆ (ತನಿಖೆ) ಗೋವಾ ಮತ್ತು ಕರ್ನಾಟಕ ವಲಯದಲ್ಲಿ ನಡೆಸಿದ ಪರಿಶೀಲನ ಕಾರ್ಯಾಚರಣೆಯಲ್ಲಿ 1,000 ಕೋ. ರೂ.ಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಅಧಿಕವಾಗಿದೆ ಎಂದರು.
ಆದಾಯ ತೆರಿಗೆ ಅಧಿಕಾರಿಗಳು ಫೆಬ್ರವರಿಯಲ್ಲಿ ಮಂಗಳೂರು ಕಚೇರಿಯಲ್ಲಿ ನಡೆಸಿದ ಒಂದು ನಿರ್ದಿಷ್ಟ ತಪಾಸಣೆ ಕಾರ್ಯಾಚರಣೆಯಲ್ಲಿ 172 ಕೋ. ರೂ. ಅಘೋಷಿತ ಆದಾಯ ಪತ್ತೆಯಾಗಿದೆ. ಫೆ. 1ರಂದು ತಪಾಸಣೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದು ಆದಾಯ ತೆರಿಗೆ ಇಲಾಖೆ (ತನಿಖೆ)ಗೆ ಗೋವಾ ಮತ್ತು ಕರ್ನಾಟಕ ವಲಯದಲ್ಲಿ ಏಕ ನಿರ್ದಿಷ್ಟ ತಪಾಸಣಾ ಕಾರ್ಯಾಚರಣೆಯಲ್ಲಿ ಈ ವರ್ಷ ಪತ್ತೆಯಾದ ಅತೀ ದೊಡ್ಡ ಅಘೋಷಿತ ಆದಾಯ. ಪ್ರಕರಣದಲ್ಲಿ ಒಳಗೊಂಡಿರುವ ವ್ಯಕ್ತಿಗಳ ತಂಡ ಹೊಂದಿರುವ ಉದ್ಯಮಗಳು ಹಾಗೂ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿ ಮಂಗಳೂರು, ಕಾರ್ಕಳ, ಉಡುಪಿ, ಪುತ್ತೂರು, ಚಿಕ್ಕಮಗಳೂರು, ಬೆಂಗಳೂರು ಕಚೇರಿ ಹಾಗೂ ಕೆಲವು ತಾಣಗಳಿಗೆ ಆದಾಯ ತೆರಿಗೆ ತನಿಖೆ ವಿಭಾಗದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವಿವರಿಸಿದರು.
Related Articles
ಆದಾಯ ತೆರಿಗೆ ಮೊಕದ್ದಮೆಗಳ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ. ಕಳೆದ 3 ವರ್ಷಗಳಿಂದ ಸುಮಾರು 160 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥವಾಗುವ ನಿಟ್ಟಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಾಲಕೃಷ್ಣನ್ ತಿಳಿಸಿದರು. ಹೆಚ್ಚುವರಿ ನಿರ್ದೇಶಕ (ತನಿಖೆ) ವಿಮಲ್ ಆನಂದ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಧಿಕಾರಿಗಳಾದ ಅರುಣ್ ವಂದಿಸಿದರು. ಸುಭಾಷ್ ನಿರೂಪಿಸಿದರು.
Advertisement
ನೂತನ ಕಚೇರಿ ಉದ್ಘಾಟನೆಆದಾಯ ತೆರಿಗೆ ಇಲಾಖೆ ತನಿಖೆ ನಿರ್ದೇಶನಾಲಯದ ಮಂಗಳೂರು ಘಟಕದ ನೂತನ ಕಚೇರಿಯನ್ನು ಪಾಂಡೇಶ್ವರದ ಅಲುºಕರ್ಕ್ ಹೌಸ್‌ನ ನೆಲ ಅಂತಸ್ತಿನಲ್ಲಿ ಬಿ.ಆರ್. ಬಾಲಕೃಷ್ಣನ್ ಅವರು ಉದ್ಘಾಟಿಸಿದರು. ಆದಾಯ ತೆರಿಗೆ (ತನಿಖೆ) ಬೆಂಗಳೂರು ಪ್ರಧಾನ ನಿರ್ದೇಶಕ ಕಿಶೋರ್ ಕುಮಾರ್ ವ್ಯವಹರೆ, ಆದಾಯ ತೆರಿಗೆ ಮಂಗಳೂರು ಪ್ರಧಾನ ಆಯುಕ್ತ ನರೋತ್ತಮ್ ಮಿಶ್ರಾ ಅತಿಥಿಗಳಾಗಿದ್ದರು. ಇದೇ ಸಂದರ್ಭ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿದ ಆದಾಯ ತೆರಿಗೆ ನಿರೀಕ್ಷಕರಾದ ಅನಿಲ್ ಕೆ., ವಾಸು ನಾೖಕ್ ಎಂ., ಶಿಜು ಕೆ., ಕೃಷ್ಣ ಮೂರ್ತಿ, ಗೋಪಿ ಟಿ.ಪಿ. ಅವರನ್ನು ಅಭಿನಂದಿಸಲಾಯಿತು. ಮಂಗಳೂರು ಕೇಂದ್ರ ಅಬಕಾರಿ ಸೇವಾ ತೆರಿಗೆ ಆಯುಕ್ತ ಡಾ| ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.