ಬ್ರಹ್ಮಾವರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಉಡುಪಿ ಜಿಲ್ಲೆಯ 1,61,421 ರೈತರಿಗೆ ಸುಮಾರು 413.19 ಕೋ.ರೂ. ಬಿಡುಗಡೆಗೊಂಡು ಆರ್ಥಿಕ ಶಕ್ತಿ ನೀಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮಂಗಳವಾರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಬಿಡುಗಡೆ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಗತಿಪರ ಕೃಷಿಕ ಶಿರ್ಲಾಲಿನ ಗುಣಪಾಲ್ ಕಡಂಬ ಮಾತನಾಡಿದರು.
ಸಹಸಂಶೋಧನ ನಿರ್ದೇಶಕ ಡಾ| ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಆದಾಯ ದ್ವಿಗುಣಗೊಳಿಸಿದ ಜಿಲ್ಲೆಯ 20ಕ್ಕೂ ಹೆಚ್ಚು ರೈತ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ವ್ಯವಸ್ಥಾಪಕಿ ಸೌಮ್ಯಾ ಕುಮಾರಿ, ಡಾ| ಸುಧಿಧೀರ್ ಕಾಮತ್, ಮಂದಾರ್ತಿಯ ಪ್ರಗತಿಪರ ಕೃಷಿಕ ಶಂಭುಶಂಕರ ರಾವ್ ಮತ್ತಿತರರಿದ್ದರು.
ಕೆವಿಕೆ ಮುಖ್ಯಸ್ಥ ಡಾ| ಧನಂಜಯ ಸ್ವಾಗತಿಸಿ, ಡಾ| ರವಿರಾಜ ಶೆಟ್ಟಿ ಜಿ. ವಂದಿಸಿದರು. ಡಾ|ನವೀನ್ ಎನ್.ಈ. ಫಲಾನುಭವಿಗಳ ಪಟ್ಟಿ ವಾಚಿಸಿ, ಡಾ| ಜಯಪ್ರಕಾಶ ಎಸ್.ಎಂ. ನಿರೂಪಿಸಿದರು.