Advertisement

ಸೈಂಟ್‌ ಮೇರಿಸ್‌ನಿಂದ ಮಲ್ಪೆಗೆ ಈಜಿದ 41 ಮಂದಿ!

02:25 AM Feb 15, 2021 | Team Udayavani |

ಉಡುಪಿ: ಈಜುಗಾರಿಕೆ ಬಗ್ಗೆ ಜನಜಾಗೃತಿ ನಿಟ್ಟಿನಲ್ಲಿ ಕಡೆಕಾರು ಜೈದುರ್ಗ ಸ್ವಿಮ್ಮಿಂಗ್‌ ಕ್ಲಬ್‌ ವತಿಯಿಂದ ಹಿರಿಯ ಈಜುಪಟು ಗಂಗಾಧರ್‌ ಜಿ. ನೇತೃತ್ವದಲ್ಲಿ 41 ಮಂದಿ ರವಿವಾರ ಸೈಂಟ್‌ ಮೇರಿಸ್‌ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ ಈಜುವ ಮೂಲಕ ಸಾಧನೆ ಮಾಡಿದ್ದಾರೆ.

Advertisement

ಬೆಳಗ್ಗೆ 7.10ಕ್ಕೆ ನಾಲ್ಕು ತಂಡಗಳಲ್ಲಿ ಹೊರಟವರು 3.8 ಕಿ.ಮೀ. ದೂರದ ಬೀಚ್‌ಗೆ 9.45ಕ್ಕೆ ತಲುಪಿದರು. ನೇತೃತ್ವ ವಹಿಸಿದ್ದ ನಾಲ್ವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡಿದ್ದರು. ಶಿವಮೊಗ್ಗದ ಹಿರಿಯರಾದ ಸುಬ್ಬಣ್ಣ ಈಜುಗಾರರಿಗೆ ಹಸುರು ನಿಶಾನೆ ತೋರಿದರು.

ಪ್ರಮಾಣಪತ್ರ ಹಸ್ತಾಂತರ:

ಬಳಿಕ ಬೀಚ್‌ ಸಮೀಪದ ಜ್ಞಾನಜ್ಯೋತಿ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಸಮುದ್ರದಲ್ಲಿ ಈಜುವ ಮೂಲಕ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದ ಗಂಗಾಧರ ಜಿ. ಕಡೆಕಾರು ಅವರಿಗೆ ಮೂಲ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಎಲ್ಲ 41 ಮಂದಿಗೂ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು.

ಎಡಿಸಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್‌, ಲೆಕ್ಕಪರಿಶೋಧಕ ಮಲ್ಲೇಶ್‌, ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಮಂಗಳೂರಿನ ಈಜು ಪಟು ಡಾ| ಸುರೇಶ್‌ ಶಾಸ್ತ್ರಿ, ಕ್ಲಬ್‌ನ ಉಪಾಧ್ಯಕ್ಷ ಚಂದ್ರ ಕುಂದರ್‌ ಉಪಸ್ಥಿತಿ

Advertisement

ಯಲ್ಲಿ ಸಭೆ ನಡೆಯಿತು. ನ್ಯಾಯವಾದಿ ರಾಜಶೇಖರ್‌ ನಿರ್ವಹಿಸಿದರು.

9ರಿಂದ 60+ ಈಜುಗಾರರು :

ಹಿರಿಯ ಈಜುಪಟು ಸೀತಾರಾಮ ಅವರ ಮುಂದಾಳತ್ವ ದಲ್ಲಿ ಮಂಗಳೂರಿನಿಂದ ಆಗಮಿಸಿದ 11 ಮಂದಿ ಪಾಲ್ಗೊಂಡಿ ದ್ದರು. 9 ವರ್ಷ ಮತ್ತು ಮೇಲ್ಪಟ್ಟ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು, ಓರ್ವ ಮಹಿಳೆ, 60 ವರ್ಷ ಮೇಲ್ಪಟ್ಟ ನಾಲ್ವರು ಅಲೆಗಳು ಮತ್ತು ಗಾಳಿಯ ಒತ್ತಡದ ಮಧ್ಯೆಯೂ ಉತ್ಸಾಹ ದಿಂದ ಈಜಿ ಗುರಿ ಮುಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next